ನವದೆಹಲಿ: ಜವಾಹರಲಾಲ್ ನೆಹರು ಅವರು ತಮ್ಮ ನಂತರ ಜಯಪ್ರಕಾಶ್ ನಾರಾಯಣ್ ಅವರನ್ನು ಪ್ರಧಾನಿಯಾಗಲು ಬಯಸಿದ್ದರು ಎನ್ನುವ ಸಂಗತಿ ಎಷ್ಟು ಜನರಿಗೆ ಗೊತ್ತು?  ಹೌದು, ಜೆಪಿ ಅವರ ಸಂಘಟನಾ ಸಾಮರ್ಥ್ಯವನ್ನು ಮೆಚ್ಚಿದ್ದ ನೆಹರು ತಮ್ಮ ನಂತರ ಜೆಪಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಇಚ್ಚಿಸಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿನ ಕಾಂಗ್ರೆಸ್ ಪಕ್ಷವು ಉತ್ತರಾಧಿಕಾರ ಯೋಜನೆ ಬಗ್ಗೆ ಬಹಳ ಕಾಳಜಿ ವಹಿಸುತ್ತಿತ್ತು ಮತ್ತು ಆಗಾಗ್ಗೆ ಯುವ ಅಧ್ಯಕ್ಷರನ್ನು ಆಯ್ಕೆ ಮಾಡಿತು. ಕಾಂಗ್ರೆಸ್ ಪಕ್ಷದ ಹೆಚ್ಚಿನ ಅಧ್ಯಕ್ಷರು ತಮ್ಮ ನಲವತ್ತರ ಹರೆಯದಲ್ಲಿದ್ದರು (1929 ರಲ್ಲಿ ನೆಹರೂ ಅವರು ಮೊದಲು ಕಾಂಗ್ರೆಸ್ ಅಧ್ಯಕ್ಷರಾದಾಗ 40 ವರ್ಷ), ಮತ್ತು ಗೋಪಾಲ್ ಕೃಷ್ಣ ಗೋಖಲೆ, ಸುಭಾಸ್ ಚಂದ್ರ ಬೋಸ್ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಮೂವತ್ತರ ಹರೆಯದಲ್ಲಿಯೇ ಕಾಂಗ್ರೆಸ್ ಅಧ್ಯಕ್ಷರ ಪದವಿಯನ್ನು ಅಲಂಕರಿಸಿದ್ದರು.


ಇನ್ನು1947 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬದಲಾಗಿ ನೆಹರೂ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುವ ಕಾರಣಗಳಲ್ಲಿ ಪ್ರಮುಖವಾಗಿ ಅವರಿಗೆ ಹೆಚ್ಚಿನ ವಯಸ್ಸಾಗಿರುವುದು ಒಂದು ಕಾರಣ ಎನ್ನಲಾಗುತ್ತದೆ. ಏಕೆಂದರೆ ಆಗ ಪಟೇಲ್ ಅವರಿಗೆ 72 ವರ್ಷ ವಯಸ್ಸಾಗಿದ್ದಾರೆ ನೆಹರೂಗೆ 58 ವರ್ಷ ವಯಸ್ಸಾಗಿತ್ತು.


1950 ರಲ್ಲಿ ಪಟೇಲ್ ಅವರ ನಿಧನದ ನಂತರ, ಭಾರತದ ರಾಜಕೀಯದ ಭವಿಷ್ಯವನ್ನು ನಿರ್ಧರಿಸುವ ಎರಡು ಪ್ರಮುಖ ಪ್ರಶ್ನೆಗಳು ಉದ್ಭವಿಸಿದವು: ಕ್ಯಾಬಿನೆಟ್‌ನಲ್ಲಿ ಯಾರು ಎರಡನೆಯ ಸ್ಥಾನದಲ್ಲಿರುತ್ತಾರೆ? ಮತ್ತು ನೆಹರೂ ಅವರ ನಂತರ ಪ್ರಧಾನ ಮಂತ್ರಿಯಾಗಿ ಯಾರು? ಎನ್ನುವುದಾಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜೆಪಿಯ ಅದ್ಭುತ ಸಾಂಸ್ಥಿಕ ಸಾಮರ್ಥ್ಯಗಳನ್ನು ಗಮನದಲ್ಲಿಟ್ಟುಕೊಂಡು ನೆಹರು ಅವರ ನಂತರ ಜಯಪ್ರಕಾಶ್ ನಾರಾಯಣ್ ಅಥವಾ ಜೆಪಿ (ಜನನ 1902) ಬಗ್ಗೆ ಉತ್ಸುಕರಾಗಿದ್ದರು ಎನ್ನಲಾಗಿದೆ. ಅಮೆರಿಕಾದದಲ್ಲಿ ಅಧುನಿಕ ಶಿಕ್ಷಣ ಪಡೆದಿದ್ದ ಜಯಪ್ರಕಾಶ್ ನಾರಾಯಣ್ ಅವರ ವಿದ್ವತ್ವ ಹಾಗೂ ಶಿಕ್ಷಣದ ಕಾರಣದಿಂದಾಗಿ ಅವರ ಮೇಲೆ ನೆಹರು ಅವರದ್ದು ಹೆಚ್ಚಿನ ಒಲವಿತ್ತು ಎನ್ನಲಾಗಿದೆ.


1952 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಅಂತರದಿಂದ ಜಯಗಳಿಸಿದ ನಂತರ, ನೆಹರೂ ಜೆಪಿಯನ್ನು ತಮ್ಮ ಸರ್ಕಾರದಲ್ಲಿ ತಮ್ಮ ಉಪನಾಯಕನಾಗಿ ಸೇರಲು ಮತ್ತು, ಅವರ ಸಾಕ್ಷಿ ಪ್ರಜ್ಞೆಯಾಗಿ ಮತ್ತು ನೆಹರೂ ತಾವು ತಪ್ಪು ಎಂದು ಭಾವಿಸಿದಾಗಲೆಲ್ಲಾ ಅವರಿಗೆ ಸಲಹೆ ನೀಡಲು ಆಹ್ವಾನಿಸಿದರು. ಅಷ್ಟೇ ಅಲ್ಲದೆ ಜೆಪಿ ಅವರ ಪ್ರಜಾ ಸಮಾಜವಾದಿ ಪಕ್ಷ ಅವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನ ಮಾಡಲು ಪ್ರಸ್ತಾಪಿಸಿದ್ದರು.