JEE Main Exam 2021: Session 4ರ ದಿನಾಂಕ ಮುಂದೂಡಿಕೆ, ಇಲ್ಲಿದೆ ಹೊಸ ದಿನಾಂಕ
JEE Main Exam 2021: ಜೆಇಇ ಮೂರನೇ ಮತ್ತು ನಾಲ್ಕನೇ ಹಂತಗಳ ನಡುವೆ ನಾಲ್ಕು ವಾರಗಳ ಅಂತರ ಇಡಲಾಗಿದೆ. ಮೊದಲ ಹಾಗೂ ಎರಡನೇ ಹಂತಗಳ ನಡುವೆ ಇರುವಂತೆ ಮೂರನೇ ಹಾಗೂ ನಾಲ್ಕನೇ ಹಂತಗಳ ನಡುವೆ ಇರುವಂತೆಯೇ 3ನೇ ಮತ್ತು 4ನೇ ಹಂತಗಳಲ್ಲಿಯೂ ಕೂಡ ಅಂತರ ನಿಗದಿಪಡಿಸಬೇಕು ಎಂಬ ಅಭ್ಯರ್ಥಿಗಳ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಸಿದ್ಧತೆ ನಡೆಸಲು ಸಮಯಾವಕಾಶ ಸಿಗಲಿದೆ ಎನ್ನಲಾಗಿದೆ.
ನವದೆಹಲಿ: JEE Main Exam 2021 New Dates - ಜೆಇಇ ಮೆನ್ 2021 ರ ಮೂರನೇ ಮತ್ತು ನಾಲ್ಕನೇ ಹಂತಗಳ (JEE Main Exam 4th Session New Dates) ನಡುವೆ ನಾಲ್ಕು ವಾರಗಳ ಅಂತರ ನೀಡಲಾಗಿದೆ. ಅಭ್ಯರ್ಥಿಗಳ ಬೇಡಿಕೆಗಳನ್ನು ಪರಿಗಣಿಸಿ ಶಿಕ್ಷಣ ಸಚಿವ (Union Education Minister) ಧರ್ಮೇಂದ್ರ ಪ್ರಧಾನ್ (Dharmendra Pradhan) ಈ ಘೋಷಣೆ ಮಾಡಿದ್ದಾರೆ. ಇದೀಗ ಜೆಇಇ ಮುಖ್ಯ ಪರೀಕ್ಷೆಯ ನಾಲ್ಕನೇ ಹಂತ ಆಗಸ್ಟ್ 26, 27 ಮತ್ತು 31 ರಂದು ಮತ್ತು ಸೆಪ್ಟೆಂಬರ್ 1 ಮತ್ತು 2 ರಂದು ನಡೆಯಲಿವೆ.
[[{"fid":"211798","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದಕ್ಕೂ ಮೊದಲು ಜೆಇಇ ಮುಖ್ಯ 2021 ರ ನಾಲ್ಕನೇ ಮತ್ತು ಅಂತಿಮ ಪರೀಕ್ಷೆಯನ್ನು ಈ ಜುಲೈ 27 ರಿಂದ ಆಗಸ್ಟ್ 2 ರವರೆಗೆ ನಡೆಸಬೇಕಾಗಿತ್ತು. ಜೆಇಇ ಮುಖ್ಯ ಪರೀಕ್ಷೆಯ ಮೂರನೇ ಹಂತ ಜುಲೈ 20 ರಿಂದ 25 ರವರೆಗೆ ಮತ್ತು ನಾಲ್ಕನೇ ಹಂತ ಜುಲೈ 27 ರಿಂದ ಆಗಸ್ಟ್ 2 ರವರೆಗೆ ನಡೆಯಬೇಕಿತ್ತು. ಈ ಎರಡು ಹಂತಗಳ ನಡುವಿನ ಅಂತರ ಕೇವಲ ಒಂದು ದಿನ ಮಾತ್ರ ಇತ್ತು. ಅನೇಕ ಅಭ್ಯರ್ಥಿಗಳು ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಎರಡು ಹಂತಗಳ ನಡುವಿನ ಅಂತರವನ್ನು ಹೆಚ್ಚಿಸಬೇಕು ಎಂದು ಅಭ್ಯರ್ಥಿಗಳು ಕೋರಿದ್ದರು. ಇದರಿಂದ ತಮಗೆ ಸಿದ್ಧತೆ ನಡೆಸಲು ಅವಕಾಶ ಸಿಗಲಿದೆ ಎಂದಿದ್ದರು. ಪ್ರಥಮ ಮತ್ತು ದ್ವಿತೀಯ ಹಂತದ ಪರೀಕ್ಷೆಗಳಲ್ಲಿ 15 ದಿನಗಳ ಅಂತರವಿತ್ತು. ಸರ್ಕಾರದ ಈ ಹೊಸ ಪ್ರಕಟಣೆಯೊಂದಿಗೆ ಇದೀಗ ಅಭ್ಯರ್ಥಿಗಳ ಬೇಡಿಕೆಗೆ ಅಂಗೀಕಾರ ದೊರೆತಂತಾಗಿದೆ.
7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ
ಜೆಇಇ ಮುಖ್ಯ ಪರೀಕ್ಷೆ 2021 ಮೂಲಕ, 23 ಐಐಟಿಗಳು, 31 ಎನ್‌ಐಟಿಗಳು, 23 ಟ್ರಿಪಲ್ ಐಟಿಗಳು ಸೇರಿದಂತೆ ದೇಶದ ಜಿಎಫ್‌ಐಟಿಯ 36000 ಸ್ಥಾನಗಳಲ್ಲಿ ಎಂಜಿನಿಯರಿಂಗ್ ಪ್ರವೇಶ ಸಿಗುತ್ತದೆ. ಜೆಇಇ ಮುಖ್ಯ ಪರೀಕ್ಷೆಗಳ ಎಲ್ಲಾ ಹಂತಗಳು ಪೂರ್ಣಗೊಂಡ ನಂತರ, ಎಲ್ಲಾ ನಾಲ್ಕು ಹಂತಗಳಲ್ಲಿ ಉತ್ತಮ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಜೆಇಇ ಅಡ್ವಾನ್ಸ್ಡ್ 2021 (JEE Advanced 2021) ಪರೀಕ್ಷೆ ನಡೆಯುವುದು ಇನ್ನೂ ಬಾಕಿ ಇದೆ ಎಂಬುದು ಇಲ್ಲಿ ಗಮನಾರ್ಹ. ಕರೋನಾದ ಕಾರಣ ಜುಲೈ 3 ರಂದು ನಿಗದಿಯಾಗಿದ್ದ ಜೆಇಇ ಅಡ್ವಾನ್ಸ್ಡ್ ಅನ್ನು ಸಹ ಮುಂದೂಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.