JEE Main Exam 2021 Dates: ಕೇಂದ್ರ ಶಿಕ್ಷಣ ಸಚಿವರಿಂದ JEE Main Exam 3ನೇ ಮತ್ತು 4ನೇ ಹಂತಗಳ ದಿನಾಂಕ ಘೋಷಣೆ
JEE Main Exam Dates : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ (Ramesh Pokhriyal Nishank)ನಿಶಾಂಕ್ ಅವರು ಜೆಇಇ ಮುಖ್ಯ ಪರೀಕ್ಷೆಗಳ (JEE Main Exam 2021) ಏಪ್ರಿಲ್ ಮತ್ತು ಮೇ ಅಧಿವೇಶನ (JEE Main Exam 2021 April And May Session) ಹೊಸ ದಿನಾಂಕಗಳನ್ನು ಇಂದು ಸಂಜೆ 7 ಗಂಟೆಗೆ ಪ್ರಕಟಿಸಿದ್ದಾರೆ.
JEE Main Exam Dates : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ (Ramesh Pokhriyal Nishank)ನಿಶಾಂಕ್ ಅವರು ಜೆಇಇ ಮುಖ್ಯ ಪರೀಕ್ಷೆಗಳ (JEE Main Exam 2021) ಏಪ್ರಿಲ್ ಮತ್ತು ಮೇ ಅಧಿವೇಶನ (JEE Main Exam 2021 April And May Session) ಹೊಸ ದಿನಾಂಕಗಳನ್ನು ಇಂದು ಸಂಜೆ 7 ಗಂಟೆಗೆ ಪ್ರಕಟಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದರು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ವರ್ಷದಿಂದ ನಾಲ್ಕು ಸೆಷನ್‌ಗಳಲ್ಲಿ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿತ್ತು, ಇದರಲ್ಲಿ ಎರಡು ಅಧಿವೇಶನಗಳ ಪರೀಕ್ಷೆಗಳು ಫೆಬ್ರವರಿ ಮತ್ತು ಮಾರ್ಚ್ 2021 ರಲ್ಲಿ ನಡೆದಿವೆ. ಮುಂದಿನ ಅಧಿವೇಶನದ ಪರೀಕ್ಷೆಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲು ಪ್ರಸ್ತಾಪಿಸಲಾಗಿತ್ತು, ಆದರೆ, ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಉಳಿದ ಎರಡೂ ಅಧಿವೇಶನಗಳನ್ನು ಮುಂದೂಡಲಾಗಿತ್ತು.
ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದ ಶಕ್ಷಣ ಸಚಿವರು, "ಆತ್ಮೀಯ ವಿದ್ಯಾರ್ಥಿಗಳೇ ಕಳೆದ ದೀರ್ಘಕಾಲದಿಂದ ನೀವು ನಿರೀಕ್ಷಿಸುತ್ತಿರುವ JEE ಮುಖ್ಯ ಪರೀಕ್ಷೆಯ ಮೂರನೇ ಮತ್ತು ನಾಲ್ಕನೇ ಹಂತದ ಪರೀಕ್ಷೆಗಳ ಕುರಿತು ಇಂದು ಸಂಜೆ 7 ಗಂಟೆಗೆ ನಾನು ನಿಮಗೆ ಮಾಹಿತಿ ನೀಡಲಿದ್ದೇನೆ" ಎಂದು ಹೇಳಿದ್ದರು
NTA ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವನ್ನು ಕೂಡ ಒದಗಿಸಿದೆ ಮತ್ತು ಇದು ನಿಮಗೆ ಖುಷಿ ಕೊಡುವ ಸಂಗತಿಯಾಗಿದೆ. ಕೊರೊನಾ ಕಾರಣದಿಂದಾಗಲಿ ಅಥವಾ ಇತರ ಯಾವುದೇ ಕಾರಣಗಳಿಂದಾಗಲಿ ಮೂರನೇ ಹಂತದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿಫಲರಾಗಿರುವ ಅಭ್ಯರ್ಥಿಗಳಿಗೆ NTA ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. NTA ಪ್ರಕಾರ, ಅರ್ಜಿ ಸಲ್ಲಿಸಲು ವಿಫಲರಾಗಿರುವ ವಿದ್ಯಾರ್ಥಿಗಳು ಇಂದು ರಾತ್ರಿ (ಅಂದರೆ ಜುಲೈ 8, 2021 ರ) 8 ಗಂಟೆಯಿಂದ ಜುಲೈ 8, 2021 ರ ರಾತ್ರಿ 11.50 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದಲ್ಲದೆ ನಾಲ್ಕನೇ ಹಂತಕ್ಕೂ ಕೂಡ NTA ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ನೀಡುತ್ತಿದೆ. ನಾಲ್ಕನೇ ಹಂತಕ್ಕೂ ಕೂಡ ಅರ್ಜಿ ಸಲ್ಲಿಸಲು ವಿಫಲರಾಗಿರುವ ವಿದ್ಯಾರ್ಥಿಗಳು ಕೂಡ ಜುಲೈ 9 ರಿಂದ ಜುಲೈ 12, 2021ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಇದಕ್ಕಾಗಿ ನಾನು NTA ಹಾಗೂ ದೇಶದ ಪ್ರಧಾನಿಗಳಿಗೆ ಆಭಾರಿಯಾಗಿದ್ದೇನೆ" ಎಂದು ನಿಶಾಂಕ್ ಹೇಳಿದಾರೆ.
GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ
ಇದಲ್ಲದೆ, "ಈ ಎರಡೂ ಹಂತಗಳ ಪರೀಕ್ಷೆಗಳಿಗೆ ಬರೆಯಲು ಒಂದು ವೇಳೆ ನೀವು ನಿಮ್ಮ ಪರೀಕ್ಷಾ ಕೇಂದ್ರಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲು ಬಯಸುತ್ತಿದ್ದರೆ, ನೀಡಲಾಗಿರುವ ಮೂರು ದಿನಗಳಲ್ಲಿ ನೀವು ನಿಮ್ಮ ಆಯ್ಕೆಯ ಕೇಂದ್ರವನ್ನು ಸಹ ಸೂಚಿಸಬಹುದು. ನಿಮ್ಮ ಇಚ್ಛೆಗೆ ಅನುಗುಣವಾಗಿ ನಿಮಗೆ ಕೇಂದ್ರ ಒದಗಿಸುವ ಪ್ರಯತ್ನ ನಮ್ಮದಾಗಲಿದೆ" ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಇದರ ಜೊತೆಗೆ "ಕೊರೊನಾ ಕಾಲದಲ್ಲಿ ಸಾಮಾಜಿಕ ಅಂತರ ನಿಯಮವನ್ನು ಸುನಿಶ್ಚಿತಗೊಳಿಸಲು ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಹೇಳಲು ನನಗೆ ಅತೀವ ಸಂತಸವಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ-ಕೇಂದ್ರ ಕ್ಯಾಬಿನೆಟ್ ನಿಂದ 8 ಹೊಸ ರಾಜ್ಯಪಾಲರ ನೇಮಕ ಪೂರ್ಣ ಪಟ್ಟಿ ಇಲ್ಲಿದೆ ಪರಿಶೀಲಿಸಿ!
"ನಾನು ನಿಮ್ಮೆಲ್ಲ ಪೋಷಕರ ಪರವಾಗಿ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮೊದಲನೆಯದಾಗಿ ವಿದ್ಯಾರ್ಥಿಗಳಿಗೆ ಒಟ್ಟು ನಾಲ್ಕು ಬಾರಿ JEE Main ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಿ, ನಾಲ್ಕು ಹಂತಗಳಲ್ಲಿನ ವಿದ್ಯಾರ್ಥಿಗಳ ಉತ್ಕೃಷ್ಟ ಸಾಧನೆಯ ಆಧಾರದ ಮೇಲೆ ಫಲಿತಾಂಶ ಪ್ರಕಟಗೊಳ್ಳಲಿದೆ. ಎರಡನೆಯದಾಗಿ, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಇಂಜಿನಿಯರ್ ಹಾಗೂ ವೈದ್ಯರಾಗಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೆ ಕಾರಣದಿಂದ ಇದೀಗ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೂ ತಮ್ಮ ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಒಟ್ಟು 13 ಭಾಷೆಗಳಲ್ಲಿ ಈ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ಮೊದಲು ಕೇವಲ ಮೂರು ಭಾಷೆಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದಿತ್ತು ಎಂಬುದು ಇಲ್ಲಿ ಗಮನಾರ್ಹ ಮತ್ತು ಇದೊಂದು ಅಮೂಲಾಗ್ರ ಬದಲಾವಣೆಯಾಗಿದೆ" ಎಂದು ನಿಶಾಂಕ್ ಹೇಳಿದ್ದಾರೆ.
ಇದನ್ನೂ ಓದಿ-ಈ ಶತಮಾನದ ಅಂತ್ಯದ ವೇಳೆಗೆ ಮನುಷ್ಯರು 130 ವರ್ಷ ಬದುಕಲು ಸಾಧ್ಯವಾಗಲಿದೆ: ಅಧ್ಯಯನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.