ನವದೆಹಲಿ: ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. 


COMMERCIAL BREAK
SCROLL TO CONTINUE READING

ಕಾಂಗ್ರೆಸ್ ರಾಜ್ಯ ಅಧ್ಯಕ್ಷ  ಅಜಯ್ ಕುಮಾರ್ ಅವರ ಉಪಸ್ಥಿತಿಯಲ್ಲಿ  ಅವರು ಪಕ್ಷವನ್ನು ಸೇರಿದ್ದಾರೆ. ಕಳೆದ ತಿಂಗಳಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಪತ್ನಿ ಗೀತಾ ಕೊಡಾ ಸೇರ್ಪಡೆಯಾಗಿದ್ದರು ಅಂದಿನಿಂದ ಮಧು ಕೊಡಾ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನುವ ಊಹಾಪೋಹ ಕೇಳಿ ಬಂದಿತ್ತು.



2006 ರಲ್ಲಿ ಸ್ವತಂತ್ರ ಶಾಸಕರಾಗಿದ್ದ  ಮಧುಕೊಡಾ ಮುಂದೆ ಆರ್ಜೆಡಿ,ಜೆಎಂಎಂ  ಮತ್ತು ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದಿಂದ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.ಈ ಹಿಂದೆ  ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ  ಕೊಡಾ ಹೆಸರು ಕೇಳಿ ಬಂದಿತ್ತು.  ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪನಿ ಲಿಮಿಟೆಡ್ ಮತ್ತು ಅನುಕೂಲ ಮಾಡಿಕೊಟ್ಟಿದ್ದರು ಎಂದು ಅವರ ವಿರುದ್ದ ಆರೋಪಗಳನ್ನು ಮಾಡಲಾತ್ತು.