ನವದೆಹಲಿ: ಗುಜರಾತಿನ ಉನಾದಲ್ಲಿ ನಡೆದ ದಲಿತರ ಹಲ್ಲೆಯ ವಿರೋಧದ ಹೋರಾಟದ ಮೂಲಕ ಬೆಳಕಿಗೆ ಬಂದ 36 ವಯಸ್ಸಿನ ವಕೀಲ ಮತ್ತು ಹೋರಾಟಗಾರ ಜಿಗ್ನೇಶ್ ಮೇವಾನಿ ಬಿಜೆಪಿಯ ಅಭ್ಯರ್ಥಿ ವಿಜಯ ಚಕ್ರವರ್ತಿ ವಿರುದ್ದ 20,000 ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.



COMMERCIAL BREAK
SCROLL TO CONTINUE READING

ಗುಜರಾತಿನಲ್ಲಿ ಶೋಷಿತ ಸಮುದಾಯಗಳ ಪ್ರತಿನಿಧಿಯಾಗಿರುವ ಜಿಗ್ನೇಶ್ ಈ ಭಾರಿ  ಚುನಾವಣಾ ರಾಜಕೀಯ ಮತ್ತು ಚಳುವಳಿಗಳೇರಡರಲ್ಲಿಯೂ ದಮನಿತರಗೆ ಧ್ವನಿಯಾಗುವ ನಿಟ್ಟಿನಲ್ಲಿ  ಗುಜರಾತಿನ ವಡಗಾಂ ಕ್ಷೇತ್ರದಲ್ಲಿ  ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಗೆ, ಕಾಂಗ್ರೆಸ್ ಪಕ್ಷವು ಯಾವುದೇ ಅಭ್ಯರ್ಥಿಯನ್ನು ಅವರ ವಿರುದ್ದ ಕಣಕ್ಕೆ ಇಳಿಸದೆ ಬೆಂಬಲ ವ್ಯಕ್ತಪಡಿಸಿತ್ತು. ಈಗ ಇವರ ಭಾರಿ ಮತ ಅಂತರಗಳ ಗೆಲುವು ಎಲ್ಲ ಶೋಷಿತ ವರ್ಗಗಳಿಗೆ ಸಂತಸವನ್ನು ತಂದಿದೆ.



2016ರಲ್ಲಿ ಗೊರಕ್ಷಕರಿಂದ ನಾಲ್ಕು ದಲಿತ ಯುವಕರು ಹಲ್ಲೆಗೆ ಒಳಗಾಗಿದ್ದರು. ಇದನ್ನು ಖಂಡಿಸಿ ಜಿಗ್ನೇಶ್ ಉನಾ ದಲಿತ ಅತ್ಯಾಚಾರ ಸಮಿತಿ ಮತ್ತು ರಾಷ್ಟ್ರೀಯ ದಲಿತ ಅಧಿಕಾರ ಮಂಚ್ ನ ನೇತೃತ್ವದಲ್ಲಿ ದಲಿತ ಅಸ್ಮಿತಾ ಯಾತ್ರೆಯನ್ನು ಅಹ್ಮದಾಬಾದ್ ನಿಂದ ಉನಾವರೆಗೆ ಹಮ್ಮಿಕೊಂಡಿದ್ದರು. ಇದು ಅವರನ್ನು ಸಾಮಾಜಿಕ ಹೋರಾಟಗಳಲ್ಲಿ ಮುಖ್ಯ ನೆಲೆಗೆ ತರುವಂತೆ ಮಾಡಿದ್ದನು  ನಾವು ಸ್ಮರಿಸಬಹುದು.