ನವದೆಹಲಿ: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಬಂಪರ್ ಕೊಡುಗೆಯೊಂದನ್ನು ಪರಿಚಯಿಸಿದೆ. ಮಾನ್ಸೂನ್ ಹಂಗಾಮದಲ್ಲಿ ಈ ಕೊಡುಗೆ ಲಭ್ಯವಿದೆ. ಈ ಕೊಡುಗೆ ರೂ.594ಕ್ಕೆ ಲಭ್ಯವಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಆರು ತಿಂಗಳವರೆಗೆ ಅನಿಯಮಿತ ಉಚಿತ ಕರೆಯೊಂದಿಗೆ ಅನಿಯಮಿತ 4G ಡಾಟಾವನ್ನು ಸಹ ಪಡೆಯಬಹುದು. ಇದಲ್ಲದೆ ಜಿಯೋ ತನ್ನ ಮಾನ್ಸೂನ್ ಹಂಗಾಮದಲ್ಲಿ ಇನ್ನೂ ಹಲವು ಕೊದುಗೆಗಳನ್ನು ನೀಡುತ್ತಿದೆ.


COMMERCIAL BREAK
SCROLL TO CONTINUE READING

594 ರೂ. ಯೋಜನೆಯಲ್ಲಿ ಏನಿದೆ?
ರಿಲಯನ್ಸ್ ಜಿಯೋದ ಮಾನ್ಸೂನ್ ಹಂಗಾಮ ಆಫರ್ ನಲ್ಲಿ ರೂ.594ರ ಯೋಜನೆ ಲಭ್ಯವಿದ್ದು, 
ಈ ಯೋಜನೆಯಲ್ಲಿ ಗ್ರಾಹಕರು ಆರು ತಿಂಗಳವರೆಗೆ ಅನಿಯಮಿತ ಉಚಿತ ಕರೆಯೊಂದಿಗೆ ಅನಿಯಮಿತ 4G ಡಾಟಾವನ್ನು ಸಹ ಪಡೆಯಬಹುದು. ಇದರ ಜೊತೆಗೆ ಅನಿಯಮಿತ SMS ಸಹ ಇದೆ. ಇದಲ್ಲದೆ, ಜಿಯೋ ತನ್ನ ಜಿಯೋ ಫೋನ್ ಬಳಕೆದಾರರಿಗೆಗಾಗಿ ಇನ್ನೂ ಎರಡು ಯೋಜನೆಗಳನ್ನು ನೀಡಿದೆ.


ಮಾನ್ಸೂನ್ ಹಂಗಾಮ ಆಫರ್ ನಲ್ಲಿ ಬಳಕೆದಾರರು ತಾವು ಬಳಸುತ್ತಿರುವ ಯಾವುದೇ ಫೀಚರ್ ಫೋನ್ ಅನ್ನು 501 ರೂ. ನೀಡಿ ಜಿಯೋ ಫೋನ್ ನೊಂದಿಗೆ ಬದಲಾಯಿಸಿಕೊಳ್ಳಬಹುದು. ಇದರೊಂದಿಗೆ ಹೊಸ ಜಿಯೋ ಫೋನ್ ಖರೀದಿಸುವ ಗ್ರಾಹಕರಿಗೆ ಈ ಯೋಜನೆಯನ್ನು ಆಕ್ಟಿವೇಟ್ ಮಾಡಿಕೊಡಲಾಗುವುದು. ಅಲ್ಲದೆ, ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ಮಾಡುವ ಬಳಕೆದಾರರಿಗೂ ಈ ಯೋಜನೆಯ ಲಾಭ ದೊರೆಯಲಿದೆ.


ಜಿಯೋದ ರೂ.99ರ ಯೋಜನೆ
ಈ ಯೋಜನೆಯಲ್ಲಿ ಅನಿಯಮಿತ ಕರೆಗಳ ಜೊತೆಗೆ ಪ್ರತಿದಿನ 100 ಎಸ್ಎಂಎಸ್, 500MB 4G ಡಾಟಾ ಸಿಗಲಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿರಲಿದೆ. ಈ ಯೋಜನೆ ಮೂಲತಃ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಬಳಕೆದಾರರಿಗೆ ಲಭ್ಯವಿದೆ. ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 14 ಜಿಬಿ ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ.


ಜಿಯೋದ ರೂ. 153ರ ಯೋಜನೆ
ಜಿಯೋ ಈ ಯೋಜನೆಯನ್ನು ಕೂಡ ಮೂಲತಃ ಜಿಯೋ ಫೋನ್ ಬಳಕೆದಾರರಿಗಾಗಿ ಪ್ರಾರಂಭಿಸಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಈ ಯೋಜನೆಯಲ್ಲಿ ಅನಿಯಮಿತ ಕರೆಗಳ ಜೊತೆಗೆ ಪ್ರತಿದಿನ 100 ಎಸ್ಎಂಎಸ್, ಬಳಕೆದಾರರು ದಿನಕ್ಕೆ 1.5 ಜಿಬಿ 4 ಜಿ ಡಾಟಾವನ್ನು ಪಡೆಯುತ್ತಾರೆ. ಬಳಕೆದಾರರು ಒಟ್ಟು 42 ಜಿಬಿ ಡೇಟಾದ ಲಾಭವನ್ನು ಪಡೆಯುತ್ತಾರೆ.