ನವದೆಹಲಿ: ಒಂದು ವೇಳೆ ನೀವು ನಿಮ್ಮ ಆತ್ಮೀಯರಿಗೆ ಫೋನ್ ವೊಂದನ್ನು ಗಿಫ್ಟ್ ನೀಡುವ ಯೋಜನೆಯಲ್ಲಿದ್ದು, ನಿಮ್ಮ ಬಜೆಟ್ ಕಡಿಮೆಯಾಗಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ನೀವು Jio Phone 2 ಅನ್ನು ಕೇವಲ ರೂ 141 ನೀಡಿ ನಿಮ್ಮ ಮನೆಗೆ ತರಬಹುದು. ಈ ಫೋನ್ ನಲ್ಲಿ ನಿಮಗೆ ವಾಟ್ಸ್ ಆಪ್, ಯುಟ್ಯೂಬ್ ಗಳ ಜೊತೆಗೆ ವಿಡಿಯೋ ಕಾಲ್ ಸೌಕರ್ಯ ಕೂಡ ಸಿಗಲಿದೆ. ಜಿಯೋ ಅಧಿಕೃತ ವೆಬ್ ಸೈಟ್ ನಲ್ಲಿ ಈ ಆಫರ್ ಲಭ್ಯವಿದೆ. ಜಿಯೋ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ Jio Pone 2 ಅನ್ನು ಸೆಲ್ ಮೂಲಕ ನೀವು ಕೇವಲ ರೂ.141 ಇಎಂಐ ಮೂಲಕ ಖರೀದಿಸಬಹುದಾಗಿದೆ.


COMMERCIAL BREAK
SCROLL TO CONTINUE READING

ಫೋನ್ ವೈಶಿಷ್ಟ್ಯಗಳು ಇಲ್ಲಿವೆ
ಜಿಯೋನ ಈ ಫೋನ್ ಬೆಲೆ ಮಾರುಕಟ್ಟೆಯಲ್ಲಿ ರೂ.2999ರಷ್ಟಿದೆ. ಜುಲೈ 2018ರಲ್ಲಿ ಮಾರುಕಟ್ಟೆಗೆ ಈ ಫೋನ್ ಬಿಡುಗಡೆ ಮಾಡಲಾಗಿತ್ತು. ಫೋನ್ ನಲ್ಲಿ 2.40 ಇಂಚಿನ ಸ್ಕ್ರೀನ್ QVGA ಡಿಸ್ಪ್ಲೇ  240×320 ಪಿಕ್ಸಲ್ ರೆಸೊಲ್ಯೂಶನ್ ಗಳೊಂದಿಗೆ ನೀಡಲಾಗಿದೆ. ಇದೊಂದು ಡುಯೇಲ್ ಸಿಮ್ ಕಾರ್ಡ್ ಫೋನ್ ಆಗಿದೆ. ಈ ಫೋನ್ KAI OS ಮೇಲೆ ಕಾರ್ಯನಿರ್ವಹಿಸುತ್ತದೆ. 2000 mAh ಬ್ಯಾಟರಿ ಬ್ಯಾಕ್ ಅಪ್ ಹೊಂದಿರುವ ಈ ಫೋನ್ 15 ದಿನಗಳ ಸ್ಟಾಂಡ್ ಬೈ ನೀಡಲಾಗಿದೆ. ಫೋನ್ ನಲ್ಲಿ 512MB RAM ಹಾಗೂ 4GB ಆಂತರಿಕ ಮೆಮೊರಿ ನೀಡಲಾಗಿದ್ದು, ಇದನ್ನು ನೀವು SD ಕಾರ್ಡ್ ಸಹಾಯದಿಂದ 128GB ವರೆಗೆ ವಿಸ್ತರಿಸಬಹುದಾಗಿದೆ. 


ಕ್ಯಾಮರಾ ಕುರಿತು ಹೇಳುವುದಾದರೆ ಫೋನ್ ನಲ್ಲಿ 2MP ರಿಯರ್ ಕ್ಯಾಮೆರಾ ನೀಡಲಾಗಿದ್ದು 0.3MP ಸೇಲ್ಫಿಗಾಗಿ VGA ಫ್ರಂಟ್ ಕ್ಯಾಮೆರಾ ನೀಡಲಾಗಿದೆ.  ಕನೆಕ್ಟಿವಿಟಿಗಾಗಿ ಫೋನ್ ನಲ್ಲಿ ವೈಫೈ, ಜಿಪಿಎಸ್, NFC ಹಾಗೂ FM ರೇಡಿಯೋ ನೀಡಲಾಗಿದೆ. ಫೋನ್ ನಲ್ಲಿ ಹೆಡ್ ಫೋನ್ ಜ್ಯಾಕ್ ಹಾಗೂ ಟಾರ್ಚ್ ಕೂಡ ನೀಡಲಾಗಿದೆ. ಈ ಫೋನ್ 22 ಭಾರತೀಯ ಭಾಷೆಗಳಿಗೆ ಸಪೋರ್ಟ್ ನೀಡುತ್ತದೆ