ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ನ 41 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಕಂಪನಿಯು ಮತ್ತೊಮ್ಮೆ ಹಲವಾರು ಘೋಷಣೆಗಳನ್ನು ಮಾಡಿದೆ. ಅತ್ಯಂತ ವಿಶೇಷ ಘೋಷಣೆ ಎಂದರೆ ಜಿಯೋ ಫೋನ್- 2. ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿ ಇದನ್ನು ಘೋಷಿಸಿದ್ದಾರೆ. ಈ ಬಾರಿ ಜಿಯೋ ಫೋನ್ 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, WhatsApp ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳು ಇದರಲ್ಲಿ ಲಭ್ಯವಿದೆ. 


COMMERCIAL BREAK
SCROLL TO CONTINUE READING

ರಿಲಯನ್ಸ್ ಕಂಪನಿಯ ನೂತನ JIO ಫೋನ್-2, ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999ರೂ. ಆದರೆ ಕಂಪನಿಯು ತನ್ನ ಹಳೆಯ ಗ್ರಾಹಕರನ್ನು ಲಾಭದಾಯಕವಾಗಿಸಲು ಆಕರ್ಷಕ ಕೊಡುಗೆ ನೀಡಿದೆ. ಇದರಿಂದಾಗಿ ಜಿಯೋ ನ ಹಳೆಯ ಗ್ರಾಹಕರು ರೂ. 998 ರವರೆಗೆ ಲಾಭ ಪಡೆದುಕೊಳ್ಳಬಹುದಾಗಿದೆ. ಈ ಕೊಡುಗೆಯನ್ನು ಜಿಯೋ ಪ್ರೈಮ್ ಸದಸ್ಯರಿಗೆ ನೀಡಲಾಗುವುದು. ಅದಕ್ಕಾಗಿ 1500 ರೂ. ಬೆಲೆಯ ಹಳೆಯ ಜಿಯೋ ಫೋನ್ ನಿಮ್ಮ ಬಳಿ ಇದ್ದರೆ ಹೊಸ JioPhone-2 ಖರೀದಿಸುವ ವೇಳೆ ಹಳೆಯ ಫೋನ್ ಬದಲಾಯಿಸಿ, ಜೊತೆಗೆ ಕೇವಲ 501 ರೂ. ನೀಡಿ ಜಿಯೋ ಫೋನ್-2 ಅನ್ನು ಖರೀದಿಸಬಹುದು.


JioPhone-2ನ ವೈಶಿಷ್ಟ್ಯಗಳು


  • ಜಿಯೋಫೋನ್ -2  ಆಗಸ್ಟ್ 15 ರಿಂದ ಲಭ್ಯವಾಗಲಿದೆ. ಇದರ ಬೆಲೆ 2,999 ರೂ.

  • ಹೋಮ್ ಕ್ಯಾಮೆರಾಗಳನ್ನು ಈ ಜಿಯೋ ಫೋನ್ನಿಂದ ರನ್ ಮಾಡಬಹುದು.

  • ಜಿಯೋಫೋನ್'ನ ಧ್ವನಿ ಆಜ್ಞೆ(ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು ಹೊಂದಿರುತ್ತದೆ. 

  • ಈ ಜಿಯೋ ಫೋನ್ನಲ್ಲಿ ಫೇಸ್ಬುಕ್, WhatsApp ಮತ್ತು YouTube ಅನ್ನು ನೀವು ಕಾಣಬಹುದು.

  • ಈ ಫೋನ್ FM, Wi-Fi, GPS ಅನ್ನು ಹೊಂದಿರುತ್ತದೆ.

  • ಫೋನ್ 512 MB RAM ಅನ್ನು ಹೊಂದಿರುತ್ತದೆ. ಆಂತರಿಕ ಮೆಮೊರಿ 4 ಜಿಬಿ ಆಗಿರುತ್ತದೆ.

  • ಫೋನ್ ಮೆಮೊರಿಯನ್ನು 128 ಜಿಬಿಗೆ ಹೆಚ್ಚಿಸಬಹುದು.

  • ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಲೌಡ್ ಮೆನೋ ಸ್ಪೀಕರ್ ಇರುತ್ತದೆ.

  • ಇದು 2000 mAh ಬ್ಯಾಟರಿ ಹೊಂದಿರುತ್ತದೆ.

  • 2 ಮೆಗಾಪಿಕ್ಸೆಲ್ ಹಿಂದಿನ ಮತ್ತು 0.3 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಇರಲಿದೆ ಎಂದು ಕಂಪನಿ ಹೇಳಿದೆ.