ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) AGMನಲ್ಲಿ ಜಿಯೋ ಫೋನ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರ ಪ್ರಮುಖ ಘೋಷಣೆಗಳನ್ನು ಪ್ರಕಟಿಸಿದೆ. ಕಂಪೆನಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ ಫೋನ್ 2 ಬಿಡುಗಡೆಗೆ ದಿನಾಂಕ ಘೋಷಿಸಿದರು. ಆಗಸ್ಟ್ 15 ರಿಂದ ಜಿಯೋ ಫೋನ್ -2 ಮಾರಾಟ ಪ್ರಾರಂಭವಾಗುತ್ತದೆ. ಇದರಲ್ಲಿ ಈ ಮೊದಲೇ ಜಿಯೋ ಫೋನ್ ಹೊಂದಿರುವ ಗ್ರಾಹಕರಿಗೆ ಹೊಸ ಜಿಯೋ ಪೋನ್ ಕೇವಲ 501 ರೂಪಾಯಿಗೆ ದೊರೆಯಲಿದೆ. ಹೊಸ ಗ್ರಾಹಕರು ಈ ಫೋನ್ ಖರೀದಿಸಲು 2,999 ರೂ. ನೀಡಬೇಕು. 


COMMERCIAL BREAK
SCROLL TO CONTINUE READING

998 ರೂಪಾಯಿಗಳ ಲಾಭ ಪಡೆಯುವುದು ಹೇಗೆ?
JIO ಫೋನ್ ಕಳೆದ ವರ್ಷ ಪ್ರಾರಂಭವಾಯಿತು. ಇದು ವೈಶಿಷ್ಟ್ಯ ಫೋನ್ ಆಗಿದೆ. JIO ಫೋನ್ 2 ಅಡ್ವಾನ್ಸ್ ವೈಶಿಷ್ಟ್ಯದೊಂದಿಗೆ ಫೋನ್ ದೊರೆಯಲಿದೆ. ಫೇಸ್ಬುಕ್, WhatsApp ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳು ಇದರಲ್ಲಿ ಲಭ್ಯವಿದೆ. ಇದು ಈ ಫೋನ್ನ ಪ್ರಮುಖ ವೈಶಿಷ್ಟ್ಯವಾಗಿದೆ. ಯಾವ ಗ್ರಾಹಕರ ಬಳಿ ಮೊಬೈಲ್ ಫೋನ್ ಇಲ್ಲವೋ ಅವರು ಈ ಫೋನ್ ಖರೀದಿಸಬಹುದು. ಈ ಫೋನ್ ರೂ. 1500 ಗಳಿಗೆ ಲಭ್ಯವಿದೆ. ರಿಲಯನ್ಸ್ ಕಂಪನಿಯ ನೂತನ JIO ಫೋನ್-2, ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999ರೂ. ಆದರೆ ಕಂಪನಿಯು ತನ್ನ ಹಳೆಯ ಗ್ರಾಹಕರನ್ನು ಲಾಭದಾಯಕವಾಗಿಸಲು ಆಕರ್ಷಕ ಕೊಡುಗೆ ನೀಡಿದೆ. ಇದರಿಂದಾಗಿ ಜಿಯೋ ನ ಹಳೆಯ ಗ್ರಾಹಕರು ರೂ. 998 ರವರೆಗೆ ಲಾಭ ಪಡೆದುಕೊಳ್ಳಬಹುದಾಗಿದೆ. ಈ ಪ್ರಯೋಜನವನ್ನು ಇತರ ಫೋನ್ ಬಳಕೆದಾರರೂ ತೆಗೆದುಕೊಳ್ಳಬಹುದು. ಈ ಕೊಡುಗೆಯನ್ನು ಜಿಯೋ ಪ್ರೈಮ್ ಸದಸ್ಯರಿಗೆ ನೀಡಲಾಗುವುದು. ಅದಕ್ಕಾಗಿ 1500 ರೂ. ಗಳನ್ನು ನೀಡಿ ಜಿಯೋ ಫೋನ್ ಖರೀದಿಸಿ. ನಂತಹ ಹೊಸ JioPhone-2 ಖರೀದಿಸುವ ವೇಳೆ ಹಳೆಯ ಫೋನ್ ಬದಲಾಯಿಸಿ, ಜೊತೆಗೆ 501 ರೂ. ನೀಡುವ ಮೂಲಕ ಜಿಯೋ ಫೋನ್-2 ಅನ್ನು ಖರೀದಿಸಬಹುದು.



JioPhone-2 ಗುಣಲಕ್ಷಣಗಳು


  • ಈ Jio ಫೋನ್ ನಲ್ಲಿ ಫೇಸ್ಬುಕ್, WhatsApp ಮತ್ತು YouTube ಅನ್ನು ನೀವು ಕಾಣಬಹುದು.

  • ಈ ಫೋನ್ FM, Wi-Fi, GPS ಅನ್ನು ಹೊಂದಿರುತ್ತದೆ.

  • ಫೋನ್ 512 MB RAM ಅನ್ನು ಹೊಂದಿದ್ದು, 4 ಜಿಬಿ ಆಂತರಿಕ ಮೆಮೊರಿ ಹೊಂದಿರುತ್ತದೆ.

  • ಫೋನ್ ಮೆಮೊರಿಯನ್ನು 128 ಜಿಬಿಗೆ ಹೆಚ್ಚಿಸಬಹುದು.

  • ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಲೌಡ್ ಮೆನೋ ಸ್ಪೀಕರ್ ಇರುತ್ತದೆ.

  • ಇದು 2000 mAh ಬ್ಯಾಟರಿ ಹೊಂದಿರುತ್ತದೆ.

  • 2 ಮೆಗಾಪಿಕ್ಸೆಲ್ ಹಿಂದಿನ ಮತ್ತು 0.3 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಇರಲಿದೆ ಎಂದು ಕಂಪನಿ ಹೇಳಿದೆ.