ಪಾಟ್ನಾ: ಮಾಜಿ ಬಿಹಾರ ಮುಖ್ಯಮಂತ್ರಿ ಮತ್ತು ಹಿಂದೂಸ್ಥಾನಿ ಆವಂ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಂಝಿ ಬುಧವಾರದಂದು ಎನ್ ಡಿ ಎ ಮೈತ್ರಿ ಕೂಟವನ್ನು ತ್ಯಜಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಶ್ವಿ ಯಾದವ್ ಅವರನ್ನು ಭೇಟಿಯಾದ ಬಳಿಕ ಮಾಂಝಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.


ಮಾಂಜಿಯ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ತೇಜಶ್ವಿ ಯಾದವ್, "ಮೀಸಲಾತಿ ಮತ್ತು ಸಂವಿಧಾನದ ವಿಷಯದ ಮೇಲೆ ಎನ್ ಡಿ ಎ ಎರಡು ಬಣಗಳಾಗಿ ವಿಭಜನೆಯಾಗಿದ್ದು, ಅಲ್ಲದೆ ಬಡವರ ಮತ್ತು ದಲಿತರ ಮೇಲೆ ದೌರ್ಜನ್ಯದ ಪ್ರಕರಣಗಳು ಪ್ರತಿದಿನ ಏರುತ್ತಿವೆ.ಮಾಂಜಿಯವರ ಅವರ ನೀತಿಗಳು ಕೂಡ ಈ ಬಜೆಟ್ ನಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ತಿಳಿಸಿದರು. ಇನ್ನು ಮುಂದುವರೆದು ಮಾಂಜಿಯವರು ಲಾಲು ಪ್ರಸಾದವರಿಗೆ ನಿಕಟವರ್ತಿಗಳಾಗಿದ್ದರಲ್ಲದೆ, ಜೊತೆಯಾಗಿ ಕಾರ್ಯನಿರ್ವಹಿಸಿದ್ದರು" ಎಂದು ತೇಜಸ್ವಿ ತಿಳಿಸಿದರು.