ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎಸ್ಪಿ ಮಲಿಕ್ ಅವರು ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸುವ ಬಗ್ಗೆ ಅಥವಾ ವಿರೂಪಗೊಳಿಸುವಿಕೆಯ ಬಗ್ಗೆ ಯಾವುದೇ ಕ್ರಮಗಳನ್ನು ರೂಪಿಸುವುದಿಲ್ಲ ಎಂದು ತಮ್ಮ ಪಕ್ಷಕ್ಕೆ ಭರವಸೆ ನೀಡಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಶನಿವಾರದಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆದರೆ ಈ ವಿಚಾರವಾಗಿ ಸೋಮವಾರದಂದು ತಮಗೆ ಸಂಸತ್ತಿನಲ್ಲಿ ಕೇಂದ್ರ ಸರ್ಕಾರವು ಭರವಸೆ ನೀಡಬೇಕೆಂದು ಅವರು ಹೇಳಿದರು. ಶನಿವಾರದಂದು 370, ಮತ್ತು 35 ಎ ವಿಧಿ ವಿಚಾರವಾಗಿ ಚರ್ಚಿಸಲು ಕೆಲವು ಪಕ್ಷದ ಸಹೋದ್ಯೋಗಿಗಳೊಂದಿಗೆ ಒಮರ್ ಅಬ್ದುಲ್ಲಾ  ಶನಿವಾರ ರಾಜ್ಯಪಾಲರನ್ನು ಭೇಟಿಯಾದರು.


ಇದಾದ ನಂತರ ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ 'ವಿಧಿ 370 ಅಥವಾ ವಿಧಿ 35 ಎ ಅಥವಾ ರಾಜ್ಯದ ಕ್ಷೇತ್ರಗಳ ವಿಂಗಡಣೆ ವಿಚಾರವಾಗಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅವರು ನಮಗೆ ಭರವಸೆ ನೀಡಿದರು" ಎಂದು ಹೇಳಿದರು.


ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ  ಸೋಮವಾರದಂದು ಕೇಂದ್ರ ಸರ್ಕಾರದಿಂದ ಹೇಳಿಕೆಗೆ ಆಗ್ರಹಿಸಲು ಪಕ್ಷದ ಸಂಸದರನ್ನು ಕೇಳಿಕೊಂಡಿದ್ದೇವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.