ಶ್ರೀನಗರ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಭದ್ರತಾ ಪಡೆಯ ಯೋಧರಿಗೆ ಭಾರಿ ಯಶಸ್ಸು ಲಭಿಸಿದೆ. ಪುಲ್ವಾಮಾ ಜಿಲ್ಲೆಯ ಟ್ರಾಲ್ ಸೆಕ್ಟರ್ ನಲ್ಲಿ ನಡೆಸಲಾದ ದೀರ್ಘಕಾಲದ ಎನ್ಕೌಂಟರ್ ನಲ್ಲಿ ಭದ್ರತಾ ಪಡೆಯ ಯೋಧರು ಹಿಜ್ಬುಲ್ ಮುಜಾಹಿದೀನ್ ನ ಕಮಾಂಡರ್ ಸೇರಿದಂತೆ ಒಟ್ಟು ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಎನ್ಕೌಂಟರ್ ನಲ್ಲಿ ಹತ್ಯೆಗೈಯಲ್ಲಾದ ಕಮಾಂಡರ್ ನನ್ನು ಹಮ್ಮದ್ ಖಾನ್ ಎಂದು ಗುರುತಿಸಲಾಗಿದೆ. ಪುಲ್ವಾಮಾದ ತ್ರಾಲ್ ಸೆಕ್ಟರ್ ನಲ್ಲಿ ಉಗ್ರರು ಕುಳಿತ ಖಚಿತ ಮಾಹಿತಿಯ ಆಧಾರದ ಮೇಲೆ ಸೇನಾ ಯೋಧರು ಈ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಮೊದಲು ಈ ಪ್ರಾಂತ್ಯದಲ್ಲಿ ಹುಡುಕು ಕಾರ್ಯಾಚರನೆಗಿಳಿದ ಜವಾನರು ಬಳಿಕ 2 ರಿಂದ 3 ಉಗ್ರರನ್ನು ಸುತ್ತುವರೆದಿದ್ದಾರೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಭದ್ರತಾ ಪಡೆಯ ಯೋಧರು ಕೂಡ ಪ್ರತಿದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಹಲವು ಗಂಟೆಗಳ ಕಾಲ ನಡೆದ ಈ ಗುಂಡಿನ ಚಕಮಕಿಯಲ್ಲಿ ಒಟ್ಟು ಮೂವರು ಉಗ್ರರನ್ನು ಮಟ್ಟಹಾಕಲಾಗಿದೆ. ಭಾರತೀಯ ಸೇನೆ, CRPF ಹಾಗೂ ಜಮ್ಮು ಮತ್ತು ಕಾಶ್ಮೀರ ಪೋಲೀಸರ ಜಂಟಿ ನೇತೃತ್ವದಲ್ಲಿ ಈ ಕಾರ್ಯಾಚರಣೆಯಲ್ಲಿ ನಡೆಸಲಾಗಿತ್ತು. 


ಇದಕ್ಕೂ ಮೊದಲು ಭಾನುವಾರ ಜಮ್ಮು ಮತ್ತು ಕಾಶ್ಮೀರದ ಕುಲಗಾಮ್ ನಲ್ಲಿ ನಡೆಸಿದ ಚೆಕ್ಕಿಂಗ್ ವೇಳೆ ಮೂವರು ಉಗ್ರರನ್ನು ಬಂಧಿಸಿದ್ದರು. ಈ ಮೂವರು ಉಗ್ರರು DCP ಜೊತೆ ಕಾರಿನಲ್ಲಿ ಹೋಗುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ. ಬಂಧನಕ್ಕೆ ಒಳಪಡಿಸಲಾಗಿರುವ ಈ ಉಗ್ರರಲ್ಲಿ ಓರ್ವ ಹಿಜ್ಬುಲ್ ನ ಟಾಪ್ ಕಮಾಂಡರ್ ಎನ್ನಲಾಗಿದೆ. ಬಂಧಿತ ಈ ಉಗ್ರರಿಂದ  ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಉಗ್ರರಲ್ಲಿ ಓರ್ವನ್ನು ಸೈಯದ್ ನವೀದ್ ಉರ್ಫ್ ನವೀದ್ ಎಂದು ಗುರುತಿಸಲಾಗಿದೆ. ಈತ ದಕ್ಷಿಣ ಹಾಗೂ ಸೆಂಟ್ರಲ್ ಕಾಶ್ಮೀರದಲ್ಲಿ ಹಲವು ತಿಂಗಳಿನಿಂದ ಸಕ್ರೀಯನಾಗಿದ್ದ ಎನ್ನಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ನಡೆಸಲಾದ ಹಲವು ಹಲ್ಲೆಗಳು ಮತ್ತು ಅಪರಾಧ ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದಾನೆ ಎನ್ನಲಾಗಿದೆ. ನಾಜನೀನ್ ಪುರ್ ಪ್ರಾಂತ್ಯದಲ್ಲಿ ನಡೆದ ಸ್ಥಳೀಯರಲ್ಲದ ನಾಗರಿಕರ ಹತ್ಯೆಯಲ್ಲಿಯೂ ಕೂಡ ಈತ ಶಾಮೀಲಾಗಿದ್ದಾನೆ ಎನ್ನಲಾಗಿದೆ.