ನವದೆಹಲಿ: ಜೆಎನ್ ಯು ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಮತಿ ಪಡೆಯದೆ ಆರೋಪಿ ಕನ್ಹಯ್ಯ ಸೇರಿ 10 ಮಂದಿ ವಿರುದ್ಧ ದೆಹಲಿ ಪೊಲೀಸರು ಚಾರ್ಜ್​ ಶೀಟ್ ಸಲ್ಲಿಸಿದ ದೆಹಲಿ ಪೋಲೀಸರ ವಿರುದ್ಧ ದೆಹಲಿ ನ್ಯಾಯಾಲಯ ಗರಂ ಆಗಿದೆ. 


COMMERCIAL BREAK
SCROLL TO CONTINUE READING

ಸರ್ಕಾರದ ಕಾನೂನು ಇಲಾಖೆಯಿಂದ ಅನುಮತಿ ಪಡೆಯದೇ ನೀವು ಹೇಗೆ ಚಾರ್ಜ್ ಶೀಟ್ ಸಲ್ಲಿಸಿದಿರಿ ಎಂದು ದೆಹಲಿ ಪೋಲಿಸರಿಗೆ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿ, ಕ್ಷಮೆಯಾಚಿಸಿರುವ ದೆಹಲಿ ಪೊಲೀಸರು, ಇನ್ನು 10 ದಿನಗಳೊಳಗೆ ಸರ್ಕಾರದ ಅನುಮತಿ ಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 


ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ಹಯ್ಯ, ನ್ಯಾಯಾಧಿಕರಣದ ವಿಚಾರಣೆ ಮುಗಿದು, ಯಾವೊಬ್ಬ ಜೆಎನ್​ಯು ವಿದ್ಯಾರ್ಥಿಯೂ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದೆ. ಮೂರು ವರ್ಷಗಳ ನಂತರ ಚಾರ್ಜ್​ಶೀಟ್​ ದಾಖಲಾಗಿದೆ. ಇದೊಂದು ರಾಜಕೀಯ ಪ್ರೇರಿತ ಕೃತ್ಯ ಎಂದು ಆರೋಪಿಸಿದ್ದು, ತಮಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ. 


ರಾಷ್ಟ್ರ ವಿರೋಧಿ ಘೊಷಣೆ ಕೂಗಿದರೆನ್ನುವ ಆರೋಪದಲ್ಲಿ ಕುಮಾರ್, ಖಲೀದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ ಅವರನ್ನು ಫೆಬ್ರವರಿ 2016ರಲ್ಲಿ ಬಂಧಿಸಲಾಗಿತ್ತು. ದೇಶದ್ರೋಹದ ಆರೋಪದ ಮೇಲೆ ಅವರ ಬಂಧನವಾಗಿ ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು. ವಿದ್ಯಾರ್ಥಿ ನಾಯಕರ ಬಂಧನ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಳೆದ ಸೋಮವಾರ 1,200 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಪ್ರಮುಖ ಆರೋಪಿ  ಕನ್ಹಯ್ಯ ಕುಮಾರ್​ ಸೇರಿ 10 ಮಂದಿಯ ವಿರುದ್ಧ ಈ ಚಾರ್ಜ್​ಶೀಟ್​ ಸಲ್ಲಿಕೆಯಾಗಿತ್ತು.