ನವದೆಹಲಿ: ಜೆಎನ್ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಗೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ತಮ್ಮ  ಟ್ವಿಟ್ಟರ್ ನಲ್ಲಿ ತಿಳಿಸಿರುವ ಉಮರ್ ಖಾಲಿದ್ " ಕಳೆದ ಮೂರು ದಿನಗಳಲ್ಲಿ ಜಿಗ್ನೇಶ್ ನಿಗೆ  ಮೂರನೇ ಬಾರಿಗೆ ಜೀವ ಬೆದರಿಕೆಯನ್ನು ಒಡ್ಡಲಾಗಿದೆ. ಈ ಬಾರಿ ಜಿಗ್ನೇಶ್ ನನ್ನು ಕೊಲ್ಲಲು ಯತ್ನಿಸುತ್ತಿರುವ ವ್ಯಕ್ತಿ ನನ್ನ ಹೆಸರನ್ನು ಸಹಿತ ಹಿಟ್ ಲಿಸ್ಟ್ ನಲ್ಲಿ ಪ್ರಸ್ತಾಪಿಸಿದ್ದಾನೆ" ಎಂದು ಉಮರ್ ಖಾಲಿದ್ ತಿಳಿಸಿದ್ದಾರೆ.


"ಈ ವಿಚಾರವಾಗಿ ಜಿಗ್ನೇಶ್ ಮೆವಾನಿ ನನಗೆ ತಿಳಿಸಿದ ಈ ಹಿನ್ನಲೆಯಲ್ಲಿ ನಾನು ಪೊಲೀಸರಿಗೆ ದೂರು ನೀಡಿದ್ದೇನೆ.ಈಗಾಗಲೇ ದೂರು ದಾಖಲಾಗಿದ್ದು ಜೀವ ಭಯವಿರುವುದರ ಕುರಿತಾಗಿ ತನಿಖೆಗೆ ಒಳಪಡಿಸಿ ರಕ್ಷಣೆ ಒದಗಿಸಲಿದ್ದಾರೆ" ಎಂದು ಖಾಲಿದ್ ತಿಳಿಸಿದ್ದಾರೆ.



ಶುಕ್ರವಾರದಂದು ಜಿಗ್ನೇಶ್ ಮವಾಣಿಗೆ ಗ್ಯಾಂಗ್ ಸ್ಟಾರ್ ರವಿ ಪೂಜಾರಿ ಎನ್ನುವ ವ್ಯಕ್ತಿ  ಕರೆ ಜೀವ ಬೆದರಿಕೆ ಒಡ್ಡಿದ್ದರು ಎಂದು ಅವರು ಆರೋಪಿಸಿದರು.