ನವದೆಹಲಿ: ಜೆಎನ್‌ಯು ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂಬ ತನ್ನ ಬೇಡಿಕೆಗೆ ಮಣಿಯುವುದಿಲ್ಲ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಮಂಗಳವಾರ ಹೇಳಿದೆ.


COMMERCIAL BREAK
SCROLL TO CONTINUE READING

ಸೋಮವಾರದಂದು ನಡೆದ ಬೃಹತ್ ಪ್ರತಿಭಟನೆಯ ಭಾಗವಾಗಿದ್ದ ಹಲವು ವಿದ್ಯಾರ್ಥಿಗಳು ಈಗ ಪೋಲೀಸರ ದೌರ್ಜ್ಯನ್ಯದ ವಿರುದ್ಧ ದೂರು ನೀಡಿದ್ದು, ಮಹಿಳಾ ಹೋರಾಟಗಾರರಿಗೆ ಬಲವಂತದ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.


ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷೆ ಘೋಷ್ ಮಾತನಾಡಿ ' ಇಂತಹ ಕ್ರೂರತೆ ಇತ್ತೀಚಿನ ದಿನಗಳಲ್ಲಿ ಕಂಡುಬಂದಿಲ್ಲ. ಆದರೆ ಈ ಚಳುವಳಿ ಕೇವಲ ಒಂದು ಒಳ್ಳೆ ಉದ್ದೇಶಕ್ಕಾಗಿ ನಡೆಯುತ್ತಿದೆ. ಇಂದು ನಮ್ಮ ಪ್ರತಿಭಟನೆಯ 23 ನೇ ದಿನವಾಗಿದೆ ಮತ್ತು ಇನ್ನೂ ಉಪಕುಲಪತಿಯಾಗಲಿ ಅಥವಾ ಆಡಳಿತವಾಗಲಿ ಯಾವುದೇ ಮಾತುಕತೆಗೆ ಮುಂದಾಗಿಲ್ಲ' ಎಂದು ವಿವಿ ವಿರುದ್ಧ ಅಸಮಾಧಾನ ಹೊರ ಹಾಕಿದರು. 


ಇನ್ನು ಮುಂದುವರೆದು “ರಿಜಿಸ್ಟ್ರಾರ್ ಉನ್ನತ-ಶ ಸಮಿತಿಯನ್ನು ಭೇಟಿಗೆ ನಿರಾಕರಿಸಿದ್ದಾರೆ ಎಂದು ನಮಗೆ ಹೇಳಲಾಗಿದೆ. ಈ ಷರತ್ತುಗಳು ಇದ್ದರೆ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯುವುದಾರೂ ಹೇಗೆ ? ನಾವು ಮುಷ್ಕರವನ್ನು ಏಕೆ ಕೊನೆಗೊಳಿಸಬೇಕು? ”ಎಂದು ಆಕ್ರೋಶ ವ್ಯಕ್ತಪಡಿಸಿದರು.