ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಧ್ವಂಸ ಮಾಡಿದ ಕೆಲವು ಮುಖವಾಡ ಧರಿಸಿದ್ದ ದುಷ್ಕರ್ಮಿಗಳನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿವೆ.


COMMERCIAL BREAK
SCROLL TO CONTINUE READING

ಬುಧವಾರ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಉಪಕುಲಪತಿ ಜಗದೇಶ್ ಕುಮಾರ್ ಅವರಿಗೆ ವಿಶ್ವವಿದ್ಯಾಲಯವನ್ನು ಸಹಜ ಸ್ಥಿತಿಗೆ ಪುನಃಸ್ಥಾಪಿಸಲು ಎಲ್ಲ ಪ್ರಯತ್ನಗಳನ್ನು ಮಾಡುವಂತೆ ಸೂಚಿಸಿದೆ. ಮಂಗಳವಾರದಂದು ಈ ಹಿಂದಿನದನ್ನು ಬಿಟ್ಟು ಕ್ಯಾಂಪಸ್‌ಗೆ ಹಿಂತಿರುಗಿ" ಎಂದು ಉಪಕುಲಪತಿ ಜಗದೇಶ್ ಕುಮಾರ್ ವಿದ್ಯಾರ್ಥಿಗಳನ್ನು ಮನವಿ ಮಾಡಿದ್ದಾರೆ.


ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಡೆದ ದಾಳಿಯ ಬಗ್ಗೆ ದೆಹಲಿ ಪೊಲೀಸರ ಅಪರಾಧ ವಿಭಾಗವು ತನಿಖೆ ನಡೆಸುತ್ತಿದ್ದು,ಈ ಘಟನೆಯಲ್ಲಿ  30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಮತ್ತು ಇದು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ. ಸುಮಾರು ಎರಡು ಗಂಟೆಗಳ ಕಾಲ ಮುಂದುವರೆದ ಹಿಂಸಾಚಾರಕ್ಕೆ ಎಡ-ನಿಯಂತ್ರಿತ ಜೆಎನ್‌ಯು ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಮತ್ತು ಎಬಿವಿಪಿ ಪರಸ್ಪರ ದೂಷಿಸಿವೆ.


ಸೋಮವಾರದಂದು ಪೊಲೀಸರು ಪ್ರಮುಖ ಸುಳಿವುಗಳನ್ನು ಕಂಡುಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ಪ್ರಕರಣವನ್ನು ಭೇದಿಸುತ್ತಾರೆ ಎಂದು ಹೇಳಿದ್ದರು.ಇನ್ನೊಂದೆಡೆಗೆ ಹಿಂದೂ ರಕ್ಷಾ ದಳ ಎಂಬ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.ಈ ಗುಂಪಿನ ನಾಯಕ ಪಿಂಕಿ ಚೌಧರಿ  ಟ್ವಿಟರ್‌ನ ವೀಡಿಯೊ ಪೋಸ್ಟ್‌ನಲ್ಲಿ ದಾಳಿಯ ಹೊಣೆಯನ್ನು ತೆಗೆದುಕೊಂಡರು. ಇದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದುವರೆಗೆ ಯಾರನ್ನೂ ಇನ್ನೂ ಬಂಧಿಸಲಾಗಿಲ್ಲವಾದರೂ, ಕಬ್ಬಿಣದ ರಾಡ್ ಗಳಿಂದ ಹೊಡೆದು ತಲೆಗೆ ಪೆಟ್ಟಾದ ಜೆಎನ್‌ಯುಎಸ್‌ಯು ಅಧ್ಯಕ್ಷ ಆಯಿಷೆ ಘೋಷ್ ಮೇಲೆ ಭದ್ರತಾ ಸಿಬ್ಬಂದಿಯನ್ನು ನಿಭಾಯಿಸಿದ ಆರೋಪ ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಜನವರಿ 1 ಮತ್ತು 4 ರಂದು ವಿಶ್ವವಿದ್ಯಾಲಯದ ಆಸ್ತಿಯನ್ನು ನಾಶಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.