ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ, ಇಲ್ಲಿದೆ ಪೂರ್ಣ ಮಾಹಿತಿ
2019ರ ಫೆಬ್ರವರಿ 7ರವರೆಗೆ ಸಲ್ಲಿಕೆಯಾಗುವ ಅರ್ಜಿಗಳು ಮಾತ್ರ ಮಾನ್ಯವಾಗಿರುತ್ತವೆ.
ನವದೆಹಲಿ: ಸೈನ್ಯದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇಲ್ಲಿದೆ ಸಿಹಿಸುದ್ದಿ. ಭಾರತೀಯ ಸೇನೆಯು SSC ಮತ್ತು NCC ಯ 55 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ನೀಡಿದೆ. ಈ ಪೋಸ್ಟ್ ಗಳಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸಲು 2019ರ ಫೆಬ್ರವರಿ 7 ಕೊನೆಯ ದಿನಾಂಕವಾಗಿದೆ. 2019ರ ಫೆಬ್ರವರಿ 7ರವರೆಗೆ ಸಲ್ಲಿಕೆಯಾಗುವ ಅರ್ಜಿಗಳು ಮಾತ್ರ ಮಾನ್ಯವಾಗಿರುತ್ತವೆ. ಮೇಲ್ ಮತ್ತು ಫೀಮೇಲ್ ಇಬ್ಬರಿಗೂ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.
ಪೋಸ್ಟ್ ಹೆಸರು: SSC, NCC
ಒಟ್ಟು ಪೋಸ್ಟ್ಗಳು: 55
ವಯೋಮಿತಿ: 19 ರಿಂದ 25 ವರ್ಷ
ಕೆಲಸದ ಸ್ಥಳ: ದೇಶದಲ್ಲಿ ಎಲ್ಲಿಯಾದರೂ
ವಿದ್ಯಾರ್ಹತೆ:
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಂಡಿರಬೇಕು. ಅಭ್ಯರ್ಥಿಗಳು ಕನಿಷ್ಟಪಕ್ಷ 50% ಅಂಕಗಳೊಂದಿಗೆ ಪದವಿಯನ್ನು ಪೂರ್ಣಗೊಳಿಸಿರಬೇಕು. ಜೊತೆಗೆ NCC ಪ್ರಮಾಣಪತ್ರ ಅಗತ್ಯ.
ವೇತನ:
ಲೆಫ್ಟಿನೆಂಟ್ ಹುದ್ದೆಗೆ ಲೆವೆಲ್ 10ರ ವೇತನ ನೀಡಲಾಗುವುದು. ಇದು 56,100 ರೂ.ನಿಂದ 1,77,500 ರೂ. ಆಗಿರುತ್ತದೆ. ಮಿಲಿಟರಿ ಸೇವೆಗಾಗಿ (MSP) ವೇತನ 15,500 ರೂಪಾಯಿಗಳನ್ನು ಲೆಫ್ಟಿನೆಂಟ್ ಪೋಸ್ಟ್ನಲ್ಲಿ ಪ್ರತಿ ತಿಂಗಳು ಪ್ರತ್ಯೇಕವಾಗಿ ನೀಡಲಾಗುವುದು.
ನೆನಪಿನಲ್ಲಿಡಿ:
ಅಭ್ಯರ್ಥಿಗಳ ಆಯ್ಕೆಯು ಬರಹ ಪರೀಕ್ಷೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಈ ಪೋಸ್ಟ್ಗಳನ್ನು ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಫೆಬ್ರವರಿ 7, 2019 ರೊಳಗೆ 4 ಗಂಟೆಗೆ ಭಾರತೀಯ ಸೇನಾ ಅಧಿಕೃತ ವೆಬ್ಸೈಟ್ joinindianarmy.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.