ನವದೆಹಲಿ: ಉದ್ಯೋಗವಿಲ್ಲದ ಬೆಳವಣಿಗೆ, ಗ್ರಾಮೀಣ ಋಣಭಾರ ಮತ್ತು ನಗರ ಅಸ್ತವ್ಯಸ್ತತೆ, ನಮ್ಮ ದೇಶದ ಯುವಕರಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಮ್ಯಾನೇಜ್ಮೆಂಟ್ ಸಂಸ್ಥೆಯೊಂದರ ಘಟಿಕೋತ್ಸವದಲ್ಲಿ ಮಾತನಾಡಿದ ಅವರು "ರೈತರ ಆತ್ಮಹತ್ಯೆಗಳು ಮತ್ತು ಆಗಾಗ ಉಂಟಾಗುತ್ತಿರುವ ರೈತರ ಚಳುವಳಿಗಳು ನಮ್ಮ ಆರ್ಥಿಕತೆಯಲ್ಲಿ ರಚನಾತ್ಮಕ ಅಸಮತೋಲನವನ್ನು ಪ್ರತಿಬಿಂಬಿಸುತ್ತದೆ.ಆದ್ದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಲ್ಲದೆ ಸೂಕ್ತ ರಾಜಕೀಯ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ ಎಂದರು.


ಈ ಹಿಂದೆ ನೋಟು ನಿಷೇಧ ಹಾಗೂ ಯೋಜನೆಗಳ ಅನುಷ್ಠಾನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದ  ಮನಮೋಹನ್ ಸಿಂಗ್  ಕೈಗಾರಿಕಾ ವಲಯದಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯತ್ನಗಳು ವಿಫಲಗೊಂಡಿದೆ.ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ವೇಗವಾಗಿ ಸಾಗುತ್ತಿಲ್ಲ ಎಂದರು.


"ಸಂಪತ್ತು ಮತ್ತು ಉದ್ಯೋಗಾವಕಾಶಗಳ ಉತ್ಪಾದನೆಗೆ ಕಾರಣವಾಗಿದ್ದ ಸಣ್ಣ ಅಸಂಘಟಿತ ವಲಯಗಳು ಪ್ರಮುಖವಾಗಿ ಜಿಎಸ್ಟಿ ಹಾಗೂ ನೋಟು ನಿಷೇಧದಿಂದ ಸಮಸ್ಯೆಯು ಇನ್ನು ಹೆಚ್ಚು ಉಲ್ಬಣಗೊಳ್ಳುವಂತೆ ಆಗಿದೆ" ಎಂದು ತಿಳಿಸಿದರು.