ಡಿಪ್ಲೊಮಾ ಮತ್ತು ಪದವಿ ಪಾಸಾದವರಿಗೆ BHEL ನಲ್ಲಿ ಉದ್ಯೋಗಾವಕಾಶ
BHEL ನೇಮಕಾತಿಗಾಗಿ, ಅರ್ಹ ಅಭ್ಯರ್ಥಿಗಳು ಡಿಸೆಂಬರ್ 21 ರವರೆಗೆ BHELನ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನವದೆಹಲಿ: ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಸಿವಿಲ್ ವಿಭಾಗದಲ್ಲಿ ಡಿಪ್ಲೊಮಾ ಮತ್ತು ಪದವಿ ಪಡೆದ ಅಭ್ಯರ್ಥಿಗಳಿಗಾಗಿ ತನ್ನ ಸೆಮಿ ಕಂಡಕ್ಟರ್ಸ್ ಮತ್ತೋ ಫೋಟೋ ವೋಲ್ಟಾಯಿಕ್ ಗ್ರೂಪ್ ನಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಮೇಲ್ವಿಚಾರಕ ಮತ್ತು ಪ್ರಾಜೆಕ್ಟ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು BHELನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಡಿಸೆಂಬರ್ 21ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. BHELನಲ್ಲಿ ಒಟ್ಟು 23 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ 2 ವರ್ಷಗಳ ಅವಧಿಯ ಕಾಂಟ್ರಾಕ್ಟ್ ಅನ್ವಯಿಸಲಿದೆ ಎಂದು ಸಂಸ್ಥೆ ಹೇಳಿದೆ. ಈ ಹುದ್ದೆಗಳಿಗೆ ಸೇರಬಯಸುವ ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಶೇ.60ರಷ್ಟು ಅಂಕಗಳನ್ನು ಪಡೆದಿರಬೇಕು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ
1:10 ರ ಅನುಪಾತದಲ್ಲಿ ಈ ನೇಮಕಾತಿ ನಡೆಸಲಾಗುತ್ತಿದ್ದು, ಎಲ್ಲಾ ಅರ್ಹ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ನಡೆಸುವ ಮೂಲಕ ನೇಮಕಾತಿ ನಡೆಸಲಾಗುತ್ತಿದೆ. ಆದರೂ, ಒಂದು ವೇಳೆ ಒಂದು ಹುದ್ದೆಗೆ ಅರ್ಹ ಅರ್ಜಿದಾರರ ಸಂಖ್ಯೆ ಖಾಲಿ ಇರುವ ಹುದ್ದೆಗಳ ಸಂಖ್ಯೆಯ 1:10ರ ಅನುಪಾತಕ್ಕಿಂತ ಹೆಚ್ಚಾಗಿದ್ದರೆ, ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ (ಪದವಿ /ಡಿಪ್ಲೊಮಾ) ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ವೈಯಕ್ತಿಕ ಸಂದರ್ಶನ ನಡೆಸಲಾಗುವುದು ಎಂದು BHEL ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರವೂ ಕೂಡ ಅರ್ಜಿಯ ನಕಲು ಪ್ರತಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಸಲ್ಲಿಸುವ ನಕಲು ಪ್ರತಿ ಡಿಸೆಂಬರ್ 26ರೊಳಗೆ BHEL ಕಚೇರಿ ತಲುಪಬೇಕು. ದೂರದ ಪ್ರದೇಶದಲ್ಲಿರುವ ಅಭ್ಯರ್ಥಿಗಳಿಗೆ ಈ ದಿನಾಂಕದಲ್ಲಿ ಸಡಿಲಿಕೆ ಇರಲಿದ್ದು, ಅಂತಹ ಅಭ್ಯರ್ಥಿಗಳು ಡಿಸೆಂಬರ್ 31ರವರೆಗೆ ತಮ್ಮ ಅರ್ಜಿಯ ನಕಲು ಪ್ರತಿಯನ್ನು BHEL ಕಚೇರಿಗೆ ತಲುಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು BHELನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಕೋರಲಾಗಿದೆ.