ನವದೆಹಲಿ : ಸೈನ್ಯ ಸೇರಿ ದೇಶ ಸೇವೆ ಮಾಡಬೇಕೆಂಬ ಹಂಬಲ ನಿಮಗಿದ್ದರೆ, ಇಲ್ಲಿದೆ ಸುವರ್ಣಾವಕಾಶ. ಭಾರತೀಯ ನೌಕಾ ಸೇನೆ Tradesmen ಗ್ರೂಪ್ ಸಿ ಹುದ್ದೆಗಳಿಗೆ ಭರ್ತಿ ಮಾಡಲು ನೊಟಿಫಿಕೇಶನ್ (Notification) ಜಾರಿ ಮಾಡಿದೆ. ಈಸ್ಟರ್ನ್ ನೇವಲ್ ಕಮಾಂಡ್ (Eastern Naval Command), ವೆಸ್ಟರ್ನ್ ನೇವಲ್ ಕಮಾಂಡ್ (Western Naval Command) ಮತ್ತು ಸದರ್ನ್ ನೇವಲ್ ಕಮಾಂಡ್ನT (Southern Naval Command) ಒಟ್ಟು 1159 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.  ಜಸ್ಟ್ ಹತ್ತನೇ ಕ್ಲಾಸ್ ಪಾಸ್ ಆಗಿದ್ದರೂ ಕೂಡಾ ನೀವು ಇದಕ್ಕೆ ಅರ್ಜಿ ಗುಜರಾಯಿಸಬಹುದು. 


COMMERCIAL BREAK
SCROLL TO CONTINUE READING

ಅತಿ ಮುಖ್ಯ ವಿಷಯ ತಿಳಿದುಕೊಳ್ಳಿ :
1. ಜಸ್ಟ್ ಹತ್ತನೇ ಕ್ಲಾಸ್ ಪಾಸಾಗಿದ್ದರೂ ಅರ್ಜಿ ಸಲ್ಲಿಸಬಹುದು.
2. ಆನ್ಲೈ ನ್ (Online) ಮೂಲಕ ಅರ್ಜಿ ಹಾಕಬೇಕು
3.  www.joinindiannavy.gov.in& www.indiannavy.nic.in. ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
4. ಅಪ್ಲಿಕೇಶನ್ ನೋಂದಣಿ ಪ್ರಕ್ರಿಯೆ ಶುರುವಾಗುವುದು ಫೆ. 22 ರಿಂದ
5. ಅಪ್ಲಿಕೇಶನ್ ನೋಂದಣಿಗೆ ಕೊನೆಯ ದಿನಾಂಕ ಮಾರ್ಚ್ 7, 2021. 


ಇದನ್ನೂ ಓದಿ : Jobs in BHEL : 10ನೇ ಕ್ಲಾಸ್ ಪಾಸ್ ಆದವರಿಗೂ ಬಿಹೆಚ್‍ಇಎಲ್ ಸೇರಲು ಸುವರ್ಣಾವಕಾಶ.!


ಅರ್ಹತೆ: 
1. ಮಾನ್ಯತೆ ಪಡೆದ ಶಾಲೆಯಿಂದ ಹತ್ತನೇ ಕ್ಲಾಸ್ (SSLC) ಪಾಸ್ ಸರ್ಟಿಫಿಕೇಟ್
2. ಐಟಿಐ (ITI)ಸರ್ಟಿಫಿಕೇಟ್ ಕೂಡಾ ಬೇಕು.
3. ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ


ಅರ್ಜಿ ಶುಲ್ಕ:
ಎಸ್ಸಿ , ಎಸ್ಟಿ, ಮಾಜಿ ಸೈನಿಕರು ಮತ್ತು ಪಿಡಬ್ಲುಬಿಡಿ (PWBD) ಮತ್ತು ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳು 205 ರೂಪಾಯಿ ಜಮೆ ಮಾಡಬೇಕು.


ಆಯ್ಕೆ ಪ್ರಕ್ರಿಯೆ ಹೀಗಿದೆ:
ಅಪ್ಲಿಕೇಶನ್ ಹಾಕಲು ಕೊನೆಯ ದಿನ ಮುಗಿದ ಬಳಿಕ ಅಪ್ಲಿಕೇಶನ್ ಸ್ಕ್ರೀನಿಂಗ್ ಮಾಡಲಾಗುವುದು. ಯೋಗ್ಯ ಅಭ್ಯರ್ಥಿಗಳಿಗೆ Online ಮೂಲಕ ಲಿಖಿತ ಪರೀಕ್ಷೆ ಇರಲಿದೆ. ಲಿಖಿತ ಪರೀಕ್ಷೆಯಲ್ಲಿ ಸಫಲರಾದವರ ಡಾಕ್ಯೂಮೆಂಟ್ ವೆರಿಫಿಕೇಶನ್ ಮಾಡಲಾಗುವುದು. 


ಇದನ್ನೂ ಓದಿ : CCL Recruitment 2021: ಯಾವುದೇ ಪರೀಕ್ಷೆಯಿಲ್ಲದೆ ಪಡೆಯಿರಿ Government Job


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.