Jobs in Paytm: ಕೊರೊನಾ ಕಾಲದಲ್ಲಿ ನೌಕರಿ ಕಳೆದುಕೊಂಡಿದ್ದೀರಾ? Paytm ನಿಂದ 20,000 ಹುದ್ದೆಗಳಿಗಾಗಿ ನೇಮಕಾತಿ
Jobs in Paytm: ಪೇಟಿಎಂ ಡಿಜಿಟಲ್ ಮಾಧ್ಯಮವನ್ನು ಅಳವಡಿಸಿಕೊಳ್ಳುವ ಬಗ್ಗೆ ವ್ಯಾಪಾರಿಗಳಿಗೆ ಶಿಕ್ಷಣ ನೀಡಲು ದೇಶಾದ್ಯಂತ FSEಗಳನ್ನು ನೇಮಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
Jobs in Paytm: ಕೊರೊನಾ ಕಾರಣದಿಂದ ಒಂದು ವೇಳೆ ನೀವೂ ಕೂಡ ನಿಮ್ಮ ನೌಕರಿಯನ್ನು ಕಳೆದುಕೊಂಡು, ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ, ಇಲ್ಲಿದೆ ನಿಮಗೊಂದು ಉತ್ತಮ ಅವಕಾಶ. ಹೌದು, ದೇಶದ ದಿಗ್ಗಜ ಡಿಜಿಟಲ್ ಪೇಮೆಂಟ್ ಹಾಗೂ ಫೈನಾನ್ಸಿಯಲ್ ಸರ್ವಿಸಸ್ ಕಂಪನಿಯಾಗಿರುವ Paytm, 20 ಸಾವಿರ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ (FSE) ನೇಮಕಾತಿ
ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಪೇಟಿಎಂ ಜಾಹೀರಾತಿನ ಪ್ರಕಾರ, ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಗಳು (FSE) ಮಾಸಿಕ ವೇತನ ಮತ್ತು ಕಮಿಷನ್ ರೂಪದಲ್ಲಿ ರೂ 35,000 ಮತ್ತು ಅದಕ್ಕಿಂತ ಹೆಚ್ಚಿನದನ್ನು ಗಳಿಸುವ ಅವಕಾಶವನ್ನು ಹೊಂದಿರುತ್ತಾರೆ ಎನ್ನಲಾಗಿದೆ. ಕಂಪನಿಯು ಯುವಕರು ಮತ್ತು ಪದವೀಧರರನ್ನು FSE (Field Sales Executive) ಗಳಾಗಿ ನೇಮಿಸಿಕೊಳ್ಳಲು ಬಯಸುತ್ತಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, "ಪೇಟಿಎಂ FSE ಅಥವಾ FSS (Field Sales Superheros)ಗಳ ನೇಮಕಾತಿಗೆ ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಅವಕಾಶವು 10 ನೇ, 12 ನೇ ತರಗತಿ ಪಾಸಾದವರಿಗೆ ಅಥವಾ ಪದವಿಧರರಿಗಾಗಿ ಇರಲಿದೆ. ಇದು ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ಸಹಾಯ ಮಾಡಲಿದೆ. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕದ ಕಾಲದಲ್ಲಿ ಕೆಲಸ ಕಳೆದುಕೊಂಡವರಿಗೆ ಇದು ಸಹಾಯ ಮಾಡಲಿದೆ.
ಇದನ್ನೂ ಓದಿ- Success Mantra: ಮಕ್ಕಳು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಈ ಅದ್ಭುತ ಉಪಾಯಗಳನ್ನು ಅನುಸರಿಸಿ
ಮಹಿಳೆಯರಿಗಾಗಿಯೂ ಕೂಡ ಪ್ರೋತ್ಸಾಹಿಸಲಾಗುವುದು
ಮೂಲಗಳ ಪ್ರಕಾರ ಕಂಪನಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಈ ಕೆಲಸಕ್ಕಾಗಿ ಪ್ರೋತ್ಸಾಹನ ನೀಡಲಿದೆ. ಈ ಕಾರ್ಯಕ್ರಮದ ಮೂಲಕ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ಮಾಡಲು ಪ್ರೋತ್ಸಾಹಿಸಲಾಗುವುದು ಹಾಗೂ ತರಬೇತಿಯನ್ನು ಕೂಡ ನೀಡಲಾಗುವುದು. FSE ಗಳು Paytm ಉತ್ಪನ್ನಗಳಾಗಿರುವ, ಆಲ್ ಇನ್ ಒನ್ QR Codes, POS ಮಶೀನ್, Paytm ಸೌಂಡ್ ಬಾಕ್ಸ್ ಇತ್ಯಾದಿಗಳನ್ನು ಪ್ರಮೋಟ್ ಮಾಡಲಿದೆ. ಇದಲ್ಲದೆ ಕಂಪನಿಯ ವ್ಯಾಲೆಟ್, UPI, Paytm Postpaid, ವ್ಯಾಪಾರಿಗಳ ಸಾಲ ಹಾಗೂ ವಿಮೆಯ ಕುರಿತಾದ ಪ್ರಮೋಶನ್ ಕೂಡ ನಡೆಸಲಿದ್ದಾರೆ.
ಇದನ್ನೂ ಓದಿ-Motivational Thoughts In Kannada:ದೇವಿ ಲಕುಮಿಯ ಆಶೀರ್ವಾದ ಪಡೆಯಬೇಕಾದರೆ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಬೇಡಿ
ಹೇಗೆ ಅಪ್ಲೈ ಮಾಡಬೇಕು?
ಇದಲ್ಲದೆ ಪೆಟಿಎಂ ಚಿಲ್ಲರೆ ಮಾರಾಟಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಗ್ಯಾರಂಟಿ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಕೂಡ ನೀಡುತ್ತಿದೆ. ಇದರಲ್ಲಿ ಸೌಂಡ್ ಬಾಕ್ಸ್, IoT (Internet Of Things) ಡಿವೈಸ್ ಗಳೂ ಕೂಡ ಶಾಮೀಲಾಗಿವೆ. ಫೀಲ್ಡ್ ಸೇಲ್ಸ್ ಎಕ್ಸಿ ಕ್ಯೂಟಿವ್ ಗಳಿಗೂ ಕೂಡ ಇದರ ಲಾಭ ಸಿಗಲಿದೆ. ಕಂಪನಿಯು ಪೇಟಿಎಂ ಈ ವರ್ಷ 2 ಕೋಟಿಗೂ ಹೆಚ್ಚು ವ್ಯಾಪಾರಿಗಳಿಗೆ ತಮ್ಮ ದಿನನಿತ್ಯದ ಕಾರ್ಯಾಚರಣೆಯಲ್ಲಿ 50 ಕೋಟಿ ರೂ. ವೆಚ್ಚ ಮಾಡುವ ಮೂಲಕ ಕಾರ್ಯಕ್ರಮವನ್ನು ಕೂಡ ನಡೆಸಲಿದೆ. ಇದಕ್ಕಾಗಿ ಕನಿಷ್ಠ 18 ವರ್ಷ, 10-12ನೇ ತರಗತಿ ಅಥವಾ ಪದವೀಧರ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಹೊಂದಿದವರಿಗೆ ನೌಕರಿ ಮಾಡುವ ಅವಕಾಶ ಸಿಗಲಿದೆ. Paytm ಆಪ್ ಮೂಲಕ ನೀವೂ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ-Success Mantra: ಪರೀಕ್ಷೆ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸಲು ಇಲ್ಲಿವೆ ಕೆಲ ಅದ್ಭುತ ಉಪಾಯಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ