Covid19 ಲಸಿಕೆ: ಪ್ರಾಣಿಗಳ ಮೇಲೆ ಯಶಸ್ವಿಯಾದ Clinical Trail, ಕೆಲವೇ ದಿನಗಳಲ್ಲಿ ಬರಲಿದೆ ವ್ಯಾಕ್ಸಿನ್!
ಮನುಷ್ಯರ ಮೇಲೆ ನಡೆಸಲಾಗುವ ಕ್ಲಿನಿಕಲ್ ಟ್ರೈಲ್ ವೇಳೆ ಈ ಲಸಿಕೆಯನ್ನು ಸುಮಾರು 1045 ರೋಗಿಗಳ ಮೇಲೆ ಟೆಸ್ಟ್ ನಡೆಸಿ ಅಧ್ಯಯನ ನಡೆಸಲಾಗುವುದು. ಇವರಲ್ಲಿ 18-55 ವರ್ಷ ವಯಸ್ಸಿನ ವ್ಯಕ್ತಿಗಳು ಶಾಮೀಲಾಗಿರಲಿದ್ದಾರೆ.
ನವದೆಹಲಿ: ಕೊರೊನಾ ವೈರಸ್ ವಿರುದ್ಧ ಕಳೆದ ಸುಮಾರು ಐದು ತಿಂಗಳುಗಳಿಂದ ವಿಜ್ಞಾನಿಗಳು ಸಮರವನ್ನೇ ಸಾರಿದ್ದಾರೆ. ಈ ನಿಟ್ಟಿನಲ್ಲಿ ಹಲವು ದೇಶಗಳ ವಿಜ್ಞಾನಿಗಳು ಕೊರೊನಾ ವೈರಸ್ ಗೆ ಲಸಿಕೆ ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿ ಜಾನ್ಸನ್ ಅಂಡ್ ಜಾನ್ಸನ್ ಮಾಹಿತಿನೊಂದನ್ನು ನೀಡಿದ್ದು, ತನ್ನ ಲಸಿಕೆ ಸಂಪೂರ್ಣ ಸಿದ್ಧಗೊಂಡಿದೆ ಎಂದು ಹೇಳಿದೆ.
ಪ್ರೋಗ್ರೆಸ್ ರಿಪೋರ್ಟ್ ಏನು?
ಈ ಕುರಿತು ಮಾಹಿತಿ ನೀಡಿರುವ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ವೈಸ್ ಪ್ರೆಸಿಡೆಂಟ್ ಹಾಗೂ ಚೀಫ್ ಸೈಂಟಿಸ್ಟ್ ಪಾಲ್ ಸ್ಟಾಫೆಲ್, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ತಮ್ಮ ಕಂಪನಿ ಸಿದ್ಧಪಡಿಸಿರುವ ಲಸಿಕೆ ಉತ್ತಮ ಪರಿಣಾಮಗಳನ್ನು ನೀಡುತ್ತಿದೆ. SARS-CoV-2 ಹೆಸರಿನ ಈ ಲಸಿಕೆಯ ಮಾನವ ಪ್ರಯೋಗ ಮುಂದಿನ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಶೀಘ್ರದಲ್ಲಿಯೇ ನಾವು ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಭರವಸೆ ಹೊಂದಿದ್ದೇವೆ" ಎಂದು ಹೇಳಿದ್ದಾರೆ.
ಈ ಕುರಿತು ಕಂಪನಿ ಕೂಡ ಹೇಳಿಕೆಯೊಂದನ್ನು ಜಾರಿಗೊಳಿಸಿದ್ದು, ಹೊಸ ಲಸಿಕೆಯ ಫೆಸ್ 1 ಹಾಗೂ ಫೆಸ್ 2 ಅಂಕಿ-ಅಂಶಗಳ ಸಮೀಕ್ಷೆ ಕೂಡ ಜಾರಿಗೊಳಿಸಿದೆ. ಮನುಷ್ಯರ ಮೇಲೆ ನಡೆಸಲಾಗುವ ಕ್ಲಿನಿಕಲ್ ಟ್ರೈಲ್ ವೇಳೆ ಈ ಲಸಿಕೆಯನ್ನು ಸುಮಾರು 1045 ರೋಗಿಗಳ ಮೇಲೆ ಟೆಸ್ಟ್ ನಡೆಸಿ ಅಧ್ಯಯನ ನಡೆಸಲಾಗುವುದು. ಇವರಲ್ಲಿ 18-55 ವರ್ಷ ವಯಸ್ಸಿನ ವ್ಯಕ್ತಿಗಳು ಶಾಮೀಲಾಗಿರಲಿದ್ದಾರೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಈ ಟ್ರೈಯಲ್ ನಲ್ಲಿ 65ಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಕೂಡ ಸೇರಿಸಲಾಗುವುದು, ಏತನ್ಮಧ್ಯೆ ಈ ಲಸಿಕೆಯನ್ನು ವಿಶ್ವಾದ್ಯಂತ ಇರುವ ರೋಗಿಗಳಿಗೆ ಶೀಘ್ರವೇ ತಲುಪಿಸಲು ಇತರೆ ಔಷದಿ ಕಂಪನಿಗಳ ಜೊತೆಗೂ ಕೂಡ ನಮ್ಮ ಚರ್ಚೆಯನ್ನು ಮುಂದುವರೆಸಲಿದ್ದೇವೆ ಎಂದು ಹೇಳಿದೆ.
ಭಾರತದಲ್ಲಿ ಕೊರೊನಾ ಪ್ರಕೋಪ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ
ದೇಶಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಕಳೆದ 24ಗಂಟೆಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು 9996 ಹೊಸ ಪರಕರಣಗಳು ಬೆಳಕಿಗೆ ಬಂದಿವೆ. ಇದೇ ವೇಳೆ ಕಳೆದ 24 ಗಂಟೆಗಳಲ್ಲಿ ಈ ಮಾರಕ ವೈರಸ್ ಒಟ್ಟು 357 ಜನರ ಪ್ರಾಣ ತೆಗೆದುಕೊಂಡಿದೆ. ಇದರಿಂದ ದೇಶಾದ್ಯಂತ ಒಟ್ಟು ಈ ಮಾರಕ ವೈರಸ್ ಗೆ ಬಲಿಯಾದವರ ಸಂಖ್ಯೆ 8102ಕ್ಕೆ ತಲುಪಿದೆ.