ನವದೆಹಲಿ: ಜಾನ್ಸನ್ ಮತ್ತು ಜಾನ್ಸನ್‌ರ ಬೇಬಿ ಪೌಡರ್ (Johnson & Johnson) ನಲ್ಲಿ, ಕ್ಯಾನ್ಸರ್ (Cancer)ಗೆ ಕಾರಣವಾಗುವ  ಅಂಶಗಳನ್ನು ಹೊಂದಿದ್ದಕ್ಕಾಗಿ ಕಂಪನಿಯ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೀಗ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು, ಜಾನ್ಸನ್ ಮತ್ತು ಜಾನ್ಸನ್ ದೊಡ್ಡ ಮೊತ್ತವನ್ನು ಪಾವತಿಸಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಒಟ್ಟು 1000 ಪ್ರಕರಣಗಳನ್ನು ಇತ್ಯರ್ಥಗೊಳಿಸಲಿದೆ ಕಂಪನಿ
ಕ್ಯಾನ್ಸರ್ ಕಾರಕ ಅಂಶಗಳ ಸಂದರ್ಭದಲ್ಲಿ ವರದಿಯಾದ 1000 ಪ್ರಕರಣಗಳ ಇತ್ಯರ್ಥಕ್ಕೆ ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ 10 ಕೋಟಿ ರೂ.ಗೂ ಅಧಿಕ ದಂಡ ಪಾವತಿಸಲು ನಿರ್ಧರಿಸಿದೆ.


ಇದುವರೆಗೆ 19000 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಈ ಪ್ರಕರಣದಲ್ಲಿ ಕಂಪನಿಯ ಮೇಲೆ ಒಟ್ಟು 19 ಸಾವಿರ ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಕಂಪನಿಯ ಪೌಡರ್ ಉತ್ಪನ್ನಗಳಲ್ಲಿರುವ 'ಅಸ್ಬೇಸ್ಟಾಸ್' ಕಾರಣ ಹಲವು ಜನರಿಗೆ ಕ್ಯಾನ್ಸರ್ ಆಗಿದೆ. ಆದರೆ, ಕಂಪನಿ ತನ್ನ ವಾದದಲ್ಲಿ ಈ ರೀತಿಯ ಯಾವುದೇ ಸಾಧ್ಯತೆಗಳನ್ನೂ ಅಲ್ಲಗಳೆದಿದೆ.


ಇದನ್ನು ಓದಿ-ಮುಂದಿನ ವರ್ಷ ಲಭ್ಯವಾಗಲಿದೆಯಂತೆ ಕರೋನಾ ಲಸಿಕೆ


"ಕೆಲವು ಸಂದರ್ಭಗಳಲ್ಲಿ ನಾವು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಿದ್ಧರಿದ್ದೇವೆ. ಆದಾಗ್ಯೂ, ಇದು 'ಬಾಧ್ಯತೆ' ಅಲ್ಲ. ಕಂಪನಿಯು ತನ್ನ ಉತ್ಪನ್ನಗಳನ್ನು ರಕ್ಷಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ" ಎಂದು ತನ್ನ ಹೊಸ ಹೇಳಿಕೆಯಲ್ಲಿ ಕಂಪನಿ ಹೇಳಿದೆ.


ಇದನ್ನು ಓದಿ- Covid19 ಲಸಿಕೆ: ಪ್ರಾಣಿಗಳ ಮೇಲೆ ಯಶಸ್ವಿಯಾದ Clinical Trail, ಕೆಲವೇ ದಿನಗಳಲ್ಲಿ ಬರಲಿದೆ ವ್ಯಾಕ್ಸಿನ್!


ಕಳೆದ ಮೇ ತಿಂಗಳಿನಲ್ಲಿ ಜಾನ್ಸನ್ ಮತ್ತು ಜಾನ್ಸನ್ ಯುಎಸ್ ಮತ್ತು ಕೆನಡಾದಲ್ಲಿ ತನ್ನ ಉತ್ಪನ್ನಗಳ ಮಾರಾಟ ಮಾಡುವುದನ್ನು ನಿಲ್ಲಿಸುವುದಾಗಿ ಹೇಳಿತ್ತು ಏಕೆಂದರೆ ತಮ್ಮ ಉತ್ಪನ್ನದ ಬಗ್ಗೆ 'ತಪ್ಪು ಮಾಹಿತಿ' ಹರಡುತ್ತಿದೆ, ಈ ಕಾರಣದಿಂದಾಗಿ ಅಲ್ಲಿ ಬೇಡಿಕೆ ಕುಸಿಯುತ್ತಿದೆ ಎಂದು ಕಂಪನಿ ಹೇಳಿತ್ತು.