ರೈತರು ಹಾಗೂ ಗ್ರಾಮೀಣ ವಿಕಾಸಕ್ಕಾಗಿ ಕೇಂದ್ರದ ಮೋದಿ ಸರ್ಕಾರ ಸತತ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. 2022 ರವರೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ನೈಸರ್ಗಿಕ ವಿಕೋಪಗಳಿಂದ ಬೆಳೆಗಳಿಗೆ ಉಂಟಾಗುವ ಹಾನಿಯನ್ನು ಎದುರಿಸಲು ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ಸಹಾಯ ಒದಗಿಸುತ್ತಿದೆ. ಇದರದೇ ಒಂದು ಭಾಗವಾಗಿ ಮೋದಿ ಸರ್ಕಾರ ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯನ್ನೂ ಕೂಡ ಆರಂಭಿಸಿದೆ. ಈ ಯೋಜನೆಯ ಅಡಿ ಸರ್ಕಾರ ಪ್ರತಿ ವರ್ಷ ರೈತರಿಗೆ ರೂ.6000 ಆರ್ಥಿಕ ನೆರವು ಒದಗಿಸುತ್ತಿದೆ.


COMMERCIAL BREAK
SCROLL TO CONTINUE READING

ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಈ ಯೋಜನೆಗೆ ಇದೀಗ ಒಂದು ವರ್ಷ ಪೂರ್ಣಗೊಂಡಿದೆ. ಈ ಯೋಜನೆಗೆ ಹೆಸರು ನೋಂದಾಯಿಸಲು ರೈತರು ಗೇಣಿ ಅಧಿಕಾರಿಗಳ ಬಳಿ ಹೋಗಬೇಕಾಗುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ವರ್ಷಾಚರಣೆಯ ಸಂದರ್ಭದಲ್ಲಿ ಸರ್ಕಾರ ಮೊಬೈಲ್ ಆಪ್ ವೊಂದನ್ನು ಬಿಡುಗಡೆಗೊಳಿಸಿದೆ. ಈ ಆಪ್ ರೈತರನ್ನು ಕಿಸಾನ್ ಸಮಾನ್ ಯೋಜನೆಯೊಂದಿಗೆ ಜೋಡಿಸಲು ಸಹಕಾರಿಯಾಗಲಿದೆ.


ಇನ್ಮುಂದೆ ಮೊಬೈಲ್ ಆಪ್ ಬಳಸಿ ಹೆಸರು ನೊಂದಾಯಿಸಬಹುದು
ಈ ಮೊಬೈಲ್ ಆಪ್ ಅನ್ನು ರಾಘ್ರೀಯ ಮಾಹಿತಿ ಕೇಂದ್ರ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಭಿವೃದ್ಧಿಗೊಳಿಸಿದ್ದು, ಅದರ ವಿನ್ಯಾಸ ಕೂಡ ಸಿದ್ಧಪಡಿಸಿದೆ. ಈ ಮೊಬೈಲ್ ಅಪ್ಲಿಕೇಶನ್ ಬಳಸಿ, ರೈತರು ತಮ್ಮ ಹಣ ಪಾವತಿ ಸ್ಥಿತಿ, ಆಧಾರ್ ಕಾರ್ಡ್ ಪ್ರಕಾರ ಸರಿಯಾದ ಹೆಸರು, ನೋಂದಣಿ ಸ್ಥಿತಿ ಮತ್ತು ಯೋಜನೆಯ ಅರ್ಹತೆ ಮತ್ತು ಸಹಾಯವಾಣಿ ಸಂಖ್ಯೆ ಇತ್ಯಾದಿಗಳನ್ನು ಪಡೆಯಬಹುದು.


ಈ ಮೊಬೈಲ್ ಅಪ್ಲಿಕೇಶನ್ ಹೊರತುಪಡಿಸಿ ರೈತರಿ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಪೋರ್ಟಲ್ ಗೂ ಕೂಡ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಬಹುದು. ಪೋರ್ಟಲ್ ನಲ್ಲಿ ತಮ್ಮ ಹೆಸರು ನೊಂದಾಯಿಸಿದ ರೈತರ ಖಾತೆಗೆ ನೇರವಾಗಿ ಹಣ ಪಡೆಯಲು ಪೋರ್ಟಲ್ ಸಹಾಯಕವಾಗಿದೆ. ರೈತರಿಗಾಗಿಯೇ ಪೋರ್ಟಲ್ ನಲ್ಲಿ ಒಂದು ವಿಭಾಗ ತೆರೆಯಲಾಗಿದ್ದು, ಇದರಲ್ಲಿ ರೈತರು ಖುದ್ದಾಗಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಸಹಾಯ ಪಡೆದು ತಮ್ಮ ವಿನಂತಿಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು. ಜೊತೆಗೆ ತಾವು ಸಲ್ಲಿಸಲಾಗಿರುವ ಅರ್ಜಿಗಳ ಸ್ಥಿತಿಗತಿಗಳ ಕುರಿತು ಕೂಡ ಮಾಹಿತಿ ಪಡೆಯಬಹುದು. ಇದನ್ನು ಬಳಸಿ ತಮ್ಮ ಆಧಾರ್ ಕಾರ್ಡ್ ಹೆಸರಿನಲ್ಲಿ ತಿದ್ದುಪಡಿ ಕೊಡ ಮಾಡಬಹುದು.