ಬಲ್ರಾಮಪುರ್: ಹೌದು, ಛತ್ತಿಸಘಡ್ ರಾಜ್ಯದ ಬಲ್ರಾಮಪುರ್ ಜಿಲ್ಲೆಯ ಗ್ರಾಮವೊಂದಕ್ಕೆ ಸ್ವತಂತ್ರ ಸಿಕ್ಕು ಏಳು ದಶಕಗಳ ನಂತರ  ಇಲ್ಲಿನ ಗ್ರಾಮಸ್ತರು ವಿದ್ಯುತ್ತಿನ ಬೆಳಕನ್ನು ನೋಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಜೋಕಪಾಥಾ ಎನ್ನುವ ಈ ಗ್ರಾಮವು ಬೆಟ್ಟದ ತಪ್ಪಲಿನಲ್ಲಿದೆ. ಇದುವರೆಗೂ ಈ ಗ್ರಾಮದ ಜನರಿಗೆ ವಿದ್ಯುತ್ ದೀಪ ಎನ್ನುವುದು ಮರೀಚಿಕೆಯಾಗಿತ್ತು. ಆದರೆ ಈಗ ಈ ಗ್ರಾಮಕ್ಕೆ ವಿದ್ಯುತ್ ಸೌಕರ್ಯವನ್ನು ಒದಗಿಸಲಾಗಿದೆ. ಆ ಮೂಲಕ ಭಾರತಕ್ಕೆ ಸ್ವಾತಂತ್ರ ಏಳು ದಶಕಗಳ ನಂತರ ಬಂದಿರುವ ಈ ವಿದ್ಯುತ್ ಸೌಭಾಗ್ಯಕ್ಕೆ ಇಲ್ಲಿನ ಗ್ರಾಮಸ್ತರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. 



ಇದಕ್ಕೆ ಪ್ರತಿಕ್ರಯಿಸಿರುವ ಇಲ್ಲಿನ ಸರ್ಪಂಚ್ ಕಡೆಗೂ ನಮ್ಮ ಊರಿಗೆ ವಿದ್ಯುತ್ ದೀಪದ ಬಂದಿರುವುದರಿಂದ ನಮಗೆ  ಸಂತಸವಾಗಿದೆ. ಇದರಿಂದ ನಮ್ಮ ಮಕ್ಕಳು ಸಹಿತ ವಿಧ್ಯಾಭ್ಯಾಸದ ಮೂಲಕ ಇನ್ನು ಮುಂದೆ ಜೀವನದಲ್ಲಿ ಯಶಸ್ಸು ಸಾಧಿಸಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ವಿಧ್ಯಾರ್ಥಿಗಳು ಸಹಿತ ತಮ್ಮ ಗ್ರಾಮಕ್ಕೆ ಬೆಳಕು ಬಂದಿರುವುದಕ್ಕೆ ಸಂತಸವ್ಯಕ್ತಪಡಿಸಿದ್ದಾರೆ.