ನವದೆಹಲಿ: ಹಲವು ಮಹಿಳಾ ಪತ್ರಕರ್ತರು ಮೀಟೂ ಚಳುವಳಿಯ ಭಾಗವಾಗಿ ಪತ್ರಕರ್ತ ಎಂ.ಜೆ.ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು.ಈ ಹಿನ್ನಲೆಯಲ್ಲಿ ಆರೋಪ ಮುಕ್ತವಾಗುವವರೆಗೆ ಅವರನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ( ಭಾರತ ಸಂಪಾದಕರ ಸಂಘ)ದ ಸದಸ್ಯತ್ವದಿಂದ ಅವರನ್ನು ಅಮಾನತುನಲ್ಲಿಡಲಾಗಿದೆ ಎಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ಪತ್ರಕರ್ತರ ಮಂಡಳಿಯ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಸುತ್ತಾ "ಸಂಘದ  ಪದಾಧಿಕಾರಿಗಳು ಈ ವಿಚಾರವಾಗಿ ನಿರ್ಧಾರವನ್ನು ತಗೆದುಕೊಂಡಿದ್ದಾರೆ.ಇದು ಸಂಘದ ಒಮ್ಮತದ ಮತ್ತು ಬಹುಮತದ ಅಭಿಪ್ರಾಯವಾಗಿದೆ,ನ್ಯಾಯಾಲಯದಲ್ಲಿನ ಪ್ರಕರಣ ಮುಗಿಯುವವರಿಗೂ ಅವರು ಅಮಾನತ್ತಿನಲ್ಲಿರುತ್ತಾರೆ ಎಂದು ಸಂಘ ತಿಳಿಸಿದೆ.


ಇತ್ತೀಚೆಗಷ್ಟೇ ಅಕ್ಬರ್ ಅವರು ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಬಂದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದೇ ರೀತಿಯಾಗಿ ಮಾಜಿ ತೆಹಲ್ಕಾದ ಸಂಪಾದಕರಾಗಿದ್ದ ತರುಣ್ ತೇಜ್ಪಾಲ್ ಮೇಲೆಯೂ ಕೂಡ ಸಂಘ ಅಮಾನತ್ತಿನ ಕ್ರಮ ತೆಗೆದುಕೊಂಡಿದೆ.ಈ ಹಿಂದೆ ಅವರು ಮೇಲೆ ಅತ್ಯಾಚಾರದ ಆರೋಪ ಬಂದಿತ್ತು.