ಬಿಹಾರ: ಗುಂಡುಹಾರಿಸಿ ಪತ್ರಕರ್ತನ ಮಗನ ಹತ್ಯೆ
ಮೃತ ಹುಡುಗನ ಕಣ್ಣಿನಲ್ಲಿ ರಕ್ತಸ್ರಾವವಾಗುತ್ತಿತ್ತು, ಆದರೆ ಆತನ ದೇಹದಲ್ಲಿ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಳಂದ: ಪತ್ರಕರ್ತನ ಮಗನನ್ನು ಗುಂಡಿಕ್ಕಿ ಕೊಂದಿರುವ ಅಮಾನುಷ ಘಟನೆ ಬಿಹಾರದ ನಳಂದದಲ್ಲಿ ನಡೆದಿದೆ. ಪತ್ರಕರ್ತನ ಮಗನನ್ನು ಗುಂಡಿಕ್ಕಿ ಹತ್ಯೆಗೈದಿರುವ ಕಿಡಿಗೇಡಿಗಳು ಅದಕ್ಕೂ ಮೊದಲು ಆತನ ಕಣ್ಣುಗಳನ್ನು ಕುರುಡಾಗಿಸಿದ್ದರು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಮೃತ ದುರ್ದೈವಿಯನ್ನು ಚುನ್ನು ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ತಂದೆ ಪ್ರಸಿದ್ಧ ಮಾಧ್ಯಮ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಮೃತ ಹುಡುಗನ ಕಣ್ಣಿನಲ್ಲಿ ರಕ್ತಸ್ರಾವವಾಗುತ್ತಿತ್ತು, ಆದರೆ ಆತನ ದೇಹದಲ್ಲಿ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ನಳಂದ ಎಸ್ಪಿ ನಿಲೇಶ್ ಕುಮಾರ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.