Modi oath taking : ಇಂದು ರಾತ್ರಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಜೊತೆಗೆ ಕೆಲವು ಕೇಂದ್ರ ಸಚಿವರು ಕೂಡ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಜವಾಹರಲಾಲ್ ನೆಹರು ಅವರು 1952, 1957 ಮತ್ತು 1962 ರಲ್ಲಿ ಸತತ ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇದೀದ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಲಿದ್ದಾರೆ.   


COMMERCIAL BREAK
SCROLL TO CONTINUE READING

ಇನ್ನು ಇಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರು, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಔತಣಕೂಟ ಭಾಗಿಯಾಗಲಿದ್ದಾರೆ. ಇದೀಗ ಪಾರ್ಟಿಯಲ್ಲಿ ಅತಿಥಿಗಳಿಗೆ ನೀಡಲಾಗುವ ಆಹಾರದ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.   


ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ..!? ಕಮಲ ಪಡೆ ನೂತನ ಸಾರಥಿ ಯಾರು.?


ಔತಣಕೂಟದಲ್ಲಿ ಸದ್ಯ ದೆಹಲಿಯಲ್ಲಿ ಬಿಸಿಲಿನ ಝಳ ಜೋರಾಗಿರುವ ಹಿನ್ನೆಲೆ, ದೇಹಕ್ಕೆ ತಂಪು ನೀಡುವ ಆಹಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದರಲ್ಲೂ ಜ್ಯೂಸ್, ಮಿಲ್ಕ್ ಶೇಕ್, ಸ್ಟಫ್ಡ್ ಲಿಚಿ, ಮಟ್ಕಾ ಗುಲ್ಪಿ, ಮ್ಯಾಂಗೊ ಕ್ರೀಂ, ರೈತಾ ಇರಲಿದೆ. ಬೇಸಿಗೆ ಕಾಲಕ್ಕೆ ತಕ್ಕ ಖಾದ್ಯಗಳ ಜೊತೆಗೆ ಸಾಂಪ್ರದಾಯಿಕ ಖಾದ್ಯಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ ಎನ್ನಲಾಗಿದೆ.


ಜೋಧಪುರಿ ಸಬ್ಜಿ, ರಾಜಸ್ಥಾನದ ಅತ್ಯಂತ ಜನಪ್ರಿಯ ತರಕಾರಿಗಳೊಂದಿಗೆ ತಯಾರಿಸಿದ ಖಾದ್ಯ ಮತ್ತು ಮಸೂರ, ಮಸಾಲೆಗಳು ಮತ್ತು ಆರೊಮ್ಯಾಟಿಕ್ ಗಿಡಮೂಲಿಕೆಗಳೊಂದಿಗೆ ಮಾಡಿದ ದಮ್ ಬಿರಿಯಾನಿ ಕೂಡ ಮೆನುನಲ್ಲಿದೆ. ಅಲ್ಲದೆ, ಐದು ವಿಧದ ಬ್ರೆಡ್ ಆಧಾರಿತ ಭಕ್ಷ್ಯಗಳು, ದೇಶದ ಹಲವು ಪ್ರದೇಶಗಳ ಆಹಾರವೂ ಅಲ್ಲಿ ಲಭ್ಯವಿರಲಿದೆ.


ಇದನ್ನೂ ಓದಿ:ಮೋದಿ ನೂತನ ಸಂಪುಟಕ್ಕೆ ಅಣ್ಣಾಮಲೈ ಸೇರ್ಪಡೆ..! ಇಂದು ಅಧಿಕಾರ ಸ್ವೀಕಾರ?


ಅತಿಥಿಗಳಿಗೆ 5 ವಿಧದ ಜ್ಯೂಸ್ ಮತ್ತು ಮಿಲ್ಕ್ ಶೇಕ್ ನೀಡಲಾಗುತ್ತದೆ. ಮೊಸರಿನಿಂದ ಮಾಡಿದ ಮೂರು ಬಗೆಯ ರೈತಾ ಕೂಡ ಲಭ್ಯವಿದೆ. ಈ ಪಾರ್ಟಿ ಸಿಹಿತಿಂಡಿ ಪ್ರಿಯರಿಗೆ ಹೇಳಿ ಮಾಡಿಸಿದಂತೆ. ಇಲ್ಲಿ ಒಟ್ಟು 8 ಬಗೆಯ ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ಪನೀರ್, ಕೆನೆ ಹಾಲು ಇತ್ಯಾದಿಗಳಿಂದ ಮಾಡಿದ ರಾಜಸ್ಥಾನಿ ಸಿಹಿಭಕ್ಷ್ಯವಾದ ರಸಮಲೈ ಕೂಡ ಇರಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.