ನವದೆಹಲಿ: ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ ಎರಡೇ ದಿನದಲ್ಲಿ ನ್ಯಾ. ರಂಜನ್ ಗೊಗೊಯ್(Justice Ranjan Gogoi) ತಮ್ಮ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ. ನ್ಯಾಯಮೂರ್ತಿ ರಂಜನ್ ಗೊಗೊಯ್ ಮುಖ್ಯ ನ್ಯಾಯಮೂರ್ತಿಯಾಗಿ, ಅವರು ತಮ್ಮ ಅಧಿಕೃತ ಬಂಗಲೆ 5 ಕೃಷ್ಣ ಮೆನನ್ ಮಾರ್ಗ(5 Krishna Menon Marg)ದಲ್ಲಿ ವಾಸಿಸುತ್ತಿದ್ದರು. ಅವರು ನವೆಂಬರ್ 17 ರಂದು ನಿವೃತ್ತರಾದರು.


COMMERCIAL BREAK
SCROLL TO CONTINUE READING

ನ್ಯಾ. ರಂಜನ್ ಗೊಗೊಯ್ ಬಳಿ ಸ್ವಂತ ಮನೆ, ವಾಹನ ಕೂಡಾ ಇಲ್ಲ


ಮಾಹಿತಿಯ ಪ್ರಕಾರ, ಅವರು ನವೆಂಬರ್ 20 ರಂದು ತಮ್ಮ ಅಧಿಕೃತ ಬಂಗಲೆ ಖಾಲಿ ಮಾಡಿ ಮತ್ತೆ ಗುವಾಹಟಿಯಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದಾರೆ. ಇದಕ್ಕೂ ಮೊದಲು ಮಾಜಿ ಸಿಜಿಐ ನ್ಯಾಯಮೂರ್ತಿ ಖೇಹರ್ ಒಂದು ವಾರದೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದರು.


ಜಸ್ಟಿಸ್ ರಂಜನ್ ಗೊಗೊಯ್ ಅವರ ತಂದೆ ಮಾಜಿ ಮುಖ್ಯಮಂತ್ರಿ


ನ್ಯಾಯಮೂರ್ತಿ ರಂಜನ್ ಗೊಗೊಯ್ ನಂತರ 47 ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಿಜೆಐ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮಾಜಿ ಸಿಜೆಐ ರಂಜನ್ ಗೊಗೊಯ್ ಅಕ್ಟೋಬರ್ 18 ರಂದು ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರನ್ನು ಅವರ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು. ನ್ಯಾಯಮೂರ್ತಿ ಬೊಬ್ಡೆ ಅವರ ಅವಧಿ 18 ತಿಂಗಳುಗಳು ಮತ್ತು ಅವರು ಏಪ್ರಿಲ್ 23, 2021 ರಂದು ನಿವೃತ್ತರಾಗಲಿದ್ದಾರೆ.