ನವದೆಹಲಿ:  ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಬೇಕೆಂದು ಹಿರಿಯ ನಾಯಕ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಸುದೀರ್ಘ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಹಲವಾರು ಏರಿಳಿತಗಳನ್ನು ಕಂಡಿದೆ. ಆದ್ದರಿಂದ ಒಂದು ಅಥವಾ ಎರಡು ಚುನಾವಣಾ ಫಲಿತಾಂಶವು ಪಕ್ಷದ ಭವಿಷ್ಯಕ್ಕಾಗಿ ಪ್ರಮುಖ ಅಂಶವಾಗಬಾರದು ಎಂದು ಮೊಯಿಲಿ ಹೇಳಿದರು.ಅಲ್ಲದೆ ರಾಹುಲ್ ಗಾಂಧಿ ಪಕ್ಷಕ್ಕೆ ಸ್ಪೂರ್ತಿದಾಯಕವಾಗಿದ್ದು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖ್ಯಸ್ಥರಾಗಿ ಹೊರಬರುವುದು ಸೂಕ್ತವಲ್ಲ ಎಂದು ಹೇಳಿದರು.


"ನರೇಂದ್ರ ಮೋದಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದ ಮಾತ್ರಕ್ಕೆ ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಯನ್ನು ಬಿಡುವುದು ಮಾನದಂಡವಲ್ಲ, ಕಾಂಗ್ರೆಸ್ ಪಕ್ಷಕ್ಕೆ ಏರಿಳಿತಗಳು ಸಾಮಾನ್ಯವಾಗಿದೆ, ನಾವು ಅವುಗಳನ್ನು ಹಲವು ಬಾರಿ ನೋಡಿದ್ದೇವೆ" ಎಂದು ಮೊಯಿಲಿ ಪಿಟಿಐಗೆ ತಿಳಿಸಿದರು.1984 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದನ್ನು ಸ್ಮರಿಸಿದ ಅವರು ,"...ಕಾಂಗ್ರೆಸ್ ಪಕ್ಷದ ಭವಿಷ್ಯವು ಕೇವಲ ಒಂದು ಲೋಕಸಭಾ ಚುನಾವಣೆ ಅಥವಾ ವಿಧಾನಸಭೆ ಚುನಾವಣೆ ಆಧಾರದ ಮೇಲೆ ನಿರ್ಧರಿಸಬಾರದು" ಎಂದು ಹೇಳಿದರು. 


ಇನ್ನು ಮುಂದುವರೆದು " ಬಿಜೆಪಿ ಸ್ವಲ್ಪ ಸಮಯದವರೆಗೆ ಆಟವನ್ನು ಆಡಬಹುದು ಆದರೆ ದೇಶದ ರಾಜಕೀಯದಲ್ಲಿ ಎಲ್ಲಾ ಸಮಯದಲ್ಲಿ ಅದು ಆಟ ಆಡಲು ಸಾಧ್ಯವಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ವಂಶ ಪರಂಪರೆಯನ್ನು ಹೊರತುಪಡಿಸಿದರೆ, ಅವರ ಸ್ವಂತ ಬಲದಿಂದ ಪಕ್ಷವನ್ನು ಮುನ್ನಡೆಸುವ ಸಮರ್ಥ ವ್ಯಕ್ತಿಯಾಗಿದ್ದಾರೆ" ಎಂದು ಮೊಯ್ಲಿ ಹೇಳಿದರು.


ಕಾಂಗ್ರೆಸ್ ಕುಟುಂಬಕ್ಕೆ ಮಾರ್ಗದರ್ಶನ ನೀಡಲು ಅವರು ಸರಿಯಾದ ವ್ಯಕ್ತಿ, ಆದ್ದರಿಂದ ಅವರು ಗಾಂಧಿ ಕುಟುಂಬದ ವಿಚಾರವಾಗಿ ಚಿಂತಿಸುವುದಕಿಂತ ಹೆಚ್ಚಾಗಿ ಕಾಂಗ್ರೆಸ್ ಕುಟುಂಬದ ಬಗ್ಗೆ ಚಿಂತಿಸಬೇಕು ಒಂದು ಚುನಾವಣೆ 135 ವರ್ಷಗಳ ಕಾಂಗ್ರೆಸ್ ನ ವೈಭವವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಮೊಯಿಲಿ ಹೇಳಿದರು.