ಲಕ್ನೋ: ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದ್ದು, 2019 ರ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದೆ. ಒಂದೆಡೆ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಇನ್ನೊಂದೆಡೆ ಜ್ಯೋತಿಷಿಗಳು ರಾಜ್ಯಕೀಯ ಭವಿಷ್ಯವಾಣಿ ನುಡಿಯಲು ಪ್ರಾರಂಭಿಸಿದ್ದಾರೆ. ಈ ಚುನಾವಣಾ ಋತುವಿನಲ್ಲಿ ಯಾವ ಪಕ್ಷಕ್ಕೆ ಪೂರ್ಣ ಬಹುಮತ ಬರಲಿದೆ ಮತ್ತು ಯಾರು ಸರ್ಕಾರ ರಚಿಸುತ್ತಾರೆ ಎಂಬುದು ಮೇ 23ರಂದು ಸ್ಪಷ್ಟವಾಗುತ್ತದೆ. ಏತನ್ಮಧ್ಯೆ, ಸನಾತನ ಜ್ಞಾನಪೀಠದ ಜ್ಯೋತಿಷ್ಯ ಪ್ರಾಧ್ಯಾಪಕ ಪಂಡಿತ್ ಯೋಗೇಶ್ ಮಿಶ್ರಾ, 2014 ರಲ್ಲಿ ವಿಜಯ ಪತಾಕೆ ಹಾರಿಸಿದ್ದ ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.


COMMERCIAL BREAK
SCROLL TO CONTINUE READING

ಮೋದಿಗೆ ಮತ್ತೆ ರಾಜಯೋಗ:
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಪಂಡಿತ್ ಯೋಗೇಶ್ ಮಿಶ್ರಾ ಹೇಳಿದ್ದಾರೆ. 1950 ರ ಸೆಪ್ಟಂಬರ್ 17 ರಂದು ಜನಿಸಿದ ನರೇಂದ್ರ ಮೋದಿಯವರ ಜಾತಕದಲ್ಲಿ ಚಂದ್ರನ ಮಹಾಧಷರ ಯೋಗವಿದೆ. ಅಂತರ್ದಶದಲ್ಲಿ ಕೇತು ಇದ್ದಾನೆ. ಕಠಿಣ ಪಂದ್ಯದಲ್ಲಿ ಅವರು ಉತ್ತಮ ಗೆಲುವು ಸಾಧಿಸುತ್ತಾರೆ ಎಂಬುದನ್ನು ಇದು ಸೂಚಿಸುತ್ತಿದೆ ಎಂದು ಮಿಶ್ರಾ ಹೇಳಿದ್ದಾರೆ.


ಮಹಾಘಟಬಂಧನ ಯಶಸ್ವಿಯಾಗುವುದಿಲ್ಲ:
ಮಹಾಘಟಬಂಧನ ಮತ್ತು ಉತ್ತರ ಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ ಬಗ್ಗೆಯೂ ಭವಿಷ್ಯ ನುಡಿದಿರುವ ಸನಾತನ ಜ್ಞಾನಪೀಠದ ಜ್ಯೋತಿಷ್ಯ ಪ್ರಾಧ್ಯಾಪಕ ಪಂಡಿತ್ ಯೋಗೇಶ್ ಮಿಶ್ರಾ, ಅಖಿಲೇಶ್-ಮಾಯಾವತಿಗೆ ಘಟಬಂಧನದಿಂದ ಅವರು ಯೋಚಿಸಿರುವಷ್ಟು ಲಾಭವಾಗುವುದಿಲ್ಲ. ದೇಶದ ಶಕ್ತಿಯಿಂದ ಬಿಜೆಪಿಯನ್ನು ತೆಗೆದುಹಾಕಲು ಮೈತ್ರಿ ರಚನೆಯಾಗಿದ್ದು, ಮಹಾಘಟಬಂಧನದಿಂದ ಬಿಜೆಪಿಗೆ ತೊಡಕಿಲ್ಲ, ಪೂರ್ಣ ಪ್ರಯತ್ನದ ನಂತರವೂ ಬಿಜೆಪಿಯನ್ನು ಸೋಲಿಸಲು ಮೈತ್ರಿ ಪಕ್ಷಗಳಿಗೆ ಸಾಧ್ಯವಾಗುವುದಿಲ್ಲ. ಕಠಿಣ ಪ್ರಯತ್ನದ ಬಳಿಕವೂ ಮಹಾಘಟಬಂಧನ  230-240 ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಲಿದೆ ಮತ್ತು ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದಿದ್ದಾರೆ.


ಇದೇ ವೇಳೆ ಪ್ರಿಯಾಂಕ ಗಾಂಧಿಯವರ ಜಾತಕದ ಬಗ್ಗೆ ತಿಳಿಸಿರುವ ಪಂಡಿತ್ ಮಿಶ್ರಾ, ಇತ್ತೀಚಿಗೆ ಸಕ್ರಿಯ ರಾಜಕಾರಣಕ್ಕೆ ಬಂದಿರುವ ಪ್ರಿಯಾಂಕ ಅವರ ಜಾತಕದಲ್ಲಿ ಶುಕ್ರ, ಶನಿ ಹಾದುಹೋಗುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ. ಜೊತೆಗೆ ತೇಲುತ್ತಿರುವ ದೋಣಿಗೆ ಆಸರೆಯಾಗುತ್ತಾರೆ ಎಂದಿದ್ದಾರೆ. ಅದೇ ಸಮಯದಲ್ಲಿ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶ, ಒರಿಸ್ಸಾ, ಕರ್ನಾಟಕ ಮತ್ತು ಬಂಗಾಳದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.


(INPUT- IANS )