ಚೆನ್ನೈ: ನಟ ರಾಜಕಾರಣಿ ಕಮಲ್ ಹಾಸನ್ ಅವರು ಇತ್ತೀಚಿಗೆ ತಮ್ಮ  ಬಿಗ್ ಬಾಸ್ ತಮಿಳು ಶೋವೊಂದರಲ್ಲಿ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರನ್ನು ಸರ್ವಾಧಿಕಾರಿ ಎಂದು ಬಿಂಬಿಸಿದ್ದಕ್ಕೆ ಅವರ ಮೇಲೆ ಈಗ ದೂರು ದಾಖಲಿಸಲಾಗಿದೆ.  


COMMERCIAL BREAK
SCROLL TO CONTINUE READING

ತಮಿಳಿನ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಮಲ್ ಹಾಸನ್ ಮಾಜಿ ಮುಖ್ಯಮಂತ್ರಿ ಜಯಲಲಿತಾರನ್ನು ದೂಷಿಸಲು ಪ್ರಯತ್ನಿಸಿದ್ದಕ್ಕೆ ಈಗ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.


ದೂರಿನಲ್ಲಿ ಕಮಲ್ ಹಾಸನ್ ಅವರು ರಿಯಾಲಿಟಿ ಷೋ ನಲ್ಲಿ ಪ್ರಸ್ತಾಪಿಸಿರುವ ಹೇಳಿಕೆಯನ್ನು ತಿಳಿಸುತ್ತಾ "ರಾಜ್ಯವನ್ನು ಆಳಿದ ಸರ್ವಾಧಿಕಾರಿಗಳಿಗೆ ಏನಾಯಿತು ಎಂದು ನಿಮಗೆ ತಿಳಿದಿದೆ" ಎಂದು ಶೋವೊಂದರಲ್ಲಿ ಅವರು ತಿಳಿಸಿದ್ದರು.ಇತ್ತೀಚಿಗೆ ಕಾರ್ಯಕ್ರಮವೊಂದರರಲ್ಲಿ ವ್ಯಕ್ತಿಯೊಬ್ಬನು ಸರ್ವಾಧಿಕಾರಿಯಾಗಿ ವರ್ತಿಸುವ ವಿಚಾರವಾಗಿ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದರು.


ಕಮಲ್ ಹಾಸನ್ ಈಗ ಮಕ್ಕಳ ನಿಧಿ ಮಯ್ಯಂ ಪಕ್ಷದ ಮೂಲಕ ಸಕ್ರೀಯ ರಾಜಕೀಯ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ.