ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪರ್ಧಿಸುವೆ ಎಂದು ಖ್ಯಾತ ಚಿತ್ರ ನಟ ಮತ್ತು ಎಂಎನ್ಎಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಮೊದಲು ತಮಿಳುನಾಡಿನ 20 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ತಮ್ಮ ಎಂಎನ್ಎಂ ಪಕ್ಷ ಸ್ಪರ್ಧಿಸಲಿದೆ ಎಂದು ಅಕ್ಟೋಬರ್ ನಲ್ಲಿ ಕಮಲ್ ಹಾಸನ್ ಘೋಷಿಸಿದ್ದರು. ತಮಿಳು ನಾಡಿನ 18 ಶಾಸಕರ ಅನರ್ಹತೆಯ ಕಾರಣ 18 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. 


ಈ ಸ್ಥಾನಗಳನ್ನು ಹೊರತುಪಡಿಸಿ ಡಿಎಂಕೆ ನಾಯಕ ಎಂ. ಕರುಣಾನಿಧಿ ಮತ್ತು ಎಐಎಡಿಎಂಕೆ ಎ.ಕೆ. ಬೋಸ್ ನಿಧನದಿಂದಾಗಿ ತೆರವಾಗಿರುವ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.