ಕೊಯಮತ್ತೂರು: ಲೋಕಸಭಾ ಚುನಾವಣೆ ಮತ್ತು ತಮಿಳುನಾಡಿನ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಂಎನ್ಎಂ ಮುಖ್ಯಸ್ಥ ಹಾಗೂ ಖ್ಯಾತ ನಟ ಕಮಲ್ ಹಾಸನ್ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ಮುಂಬರುವ ಲೋಕಸಭಾ ಚುನಾವಣೆ ಅಥವಾ ತಮಿಳುನಾಡಿನ 18 ಕ್ಷೇತ್ರಗಳಿಗೆ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ" ಎಂದು ಭಾನುವಾರ ರಾತ್ರಿ ಕೊಯಮತ್ತೂರಿನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಕಲ್ ನಿಧಿ ಮೈಮ್ (ಎಂಎನ್ಎಂ) ಸಂಸ್ಥಾಪಕ ಕಮಲ್ ಹಾಸನ್ ಹೇಳಿದರು.


"ನನಗೆ ಬಹಳಷ್ಟು ಕೆಲಸಗಳಿವೆ. ನನ್ನ ಅಭ್ಯರ್ಥಿಗಳ ಯಶಸ್ಸಿಗೆ ನಾನು ಕೆಲಸ ಮಾಡುತ್ತೇನೆ." ಹಾಗಾಗಿ ಲೋಕಸಭಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯಬೇಕಿದೆ ಎಂದು ಅವರು ಹೇಳಿದರು. 


ಎಂಎನ್ಎಂ ಮುಖ್ಯಸ್ಥ ಪಕ್ಷದ ಮ್ಯಾನಿಫೆಸ್ಟೋ(ಪ್ರನಾಳಿಕೆ) ಮತ್ತು ಲೋಕಸಭಾ ಚುನಾವಣೆ ಮತ್ತು ತಮಿಳುನಾಡು ಉಪ ಚುನಾವಣೆಗಳಿಗಾಗಿ ಅಭ್ಯರ್ಥಿಗಳ ಎರಡನೇ ಮತ್ತು ಅಂತಿಮ ಪಟ್ಟಿ ಬಿಡುಗಡೆ ಮಾಡಿದರು.


ಅದರ ಪ್ರಣಾಳಿಕೆಯಲ್ಲಿ, ರಾಜ್ಯದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು, ಬಡತನವನ್ನು ತೊಡೆದುಹಾಕಲು, ಕೊಳಚೆ ರಹಿತ ತಮಿಳುನಾಡು ನಿರ್ಮಾಣ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಪುರುಷರಂತೆ ಮಹಿಳಾ ಕಾರ್ಮಿಕರಿಗೆ ಸಮಾನವಾದ ವೇತನವನ್ನು ಖಾತ್ರಿಪಡಿಸಿಕೊಳ್ಳಲು ಭರವಸೆ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


ಚುನಾವಣೆಯಲ್ಲಿ ಆಯ್ಕೆಯಾದ ಯಾವುದೇ ಅಭ್ಯರ್ಥಿಯು ಮತದಾರರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದಲ್ಲಿ ಅಥವಾ ನಾಯಕರ ವಿರುದ್ಧ ಯಾವುದೇ ರೀತಿಯ ದೂರು ದಾಖಲದಲ್ಲಿ ಪಕ್ಷದ ವತಿಯಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂತಹ ಅಭ್ಯರ್ಥಿಗಳಿಂದ ತಕ್ಷಣವೇ ರಾಜೀನಾಮೆ ಪಡೆಯಲಾಗುವುದು ಎಂದು ಕಮಲ್ ಹಾಸನ್ ಹೇಳಿದ್ದಾರೆ.