ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ಇಂದಿನಿಂದ ತಮ್ಮ ನೂತನ ರಾಜಕೀಯ ಪಕ್ಷ ಪ್ರಾರಂಭಿಸಲಿದ್ದು, ತಮಿಳು ರಾಜಕೀಯದಲ್ಲಿ ಹೊಸ 'ಕಮಾಲ್' ಸೃಷ್ಟಿಸಲಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ ಹೊಸ ರಾಜಕೀಯ ಪ್ರಕ್ಷ ಆರಂಭಿಸುವುದಾಗಿ ಸುಳಿವು ನೀಡಿದ್ದ ಕಮಲ್ ಹಾಸನ್ ಬುಧವಾರ(ಫೆ.21) ಮದುರೆಯಲ್ಲಿ ಹೊಸ ರಾಜಕೀಯ ಪಕ್ಷದ ಉದ್ಘಾಟನೆ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಹಲವಾರು ರಾಜಕೀಯ ನಾಯಕರನ್ನು ಭೇಟಿಯಾಗಿದ್ದ ಕಮಲ್ ಹಾಸನ್ ನೂತನ ಪಕ್ಷದ ಉದ್ಘಾಟನಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದಾರೆ. 


ಅಬ್ದುಲ್ ಕಲಾಂ ರ 'ಉತ್ತಮ ತಮಿಳುನಾಡು' ಕಲ್ಪನೆಯ ಸಾಕಾರಕ್ಕೆ ಯತ್ನಿಸುವೆ -ಕಮಲ್ ಹಾಸನ್
ರಾಮೇಶ್ವರಂನಲ್ಲಿರುವ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಿವಾಸದಿಂದ ಇಂದು ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸುವ ಕಮಲ್ ಹಾಸನ್, ಕಲಾಂ ಕಂಡಿದ್ದ "ಉತ್ತಮ ತಮಿಳುನಾಡಿನ" ಕನಸನ್ನು ನನಸು ಮಾಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.


ರಾಜಕೀಯ ಪ್ರವೇಶಕ್ಕೆ ಎಐಎಡಿಎಂಕೆ ಕಳಪೆ ಆಡಳಿತ ಕಾರಣ
ತಮ್ಮ ರಾಜಕೀಯ ಪ್ರವೇಶಕ್ಕೆ ಎಐಎಡಿಎಂಕೆ ಸರ್ಕಾರದ ಕಳಪೆ ಆಡಳಿತವೇ ಕಾರಣ  ಎಂದು ಹಾಸನ್ ಹೇಳಿದ್ದಾರೆ.


ದ್ರಾವಿಡ ಸಿದ್ಧಾಂತಗಳು ರಾಜಕೀಯದಲ್ಲಿ ಯಶಸ್ವಿಯಾಗುತ್ತವೆ
ತಮಿಳುನಾಡಿನ ದ್ರಾವಿಡ ಪಕ್ಷಗಳ ಉಪಸ್ಥಿತಿ ಬಗ್ಗೆ ಮತ್ತು ಅದೇ ಸಿದ್ಧಾಂತದೊಂದಿಗೆ ಹೇಗೆ ಯಶಸ್ವಿಯಾಗಬಹುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಾಸನ್, ದ್ರಾವಿಡ ಸಿದ್ಧಾಂತಗಳು ರಾಜಕೀಯದಲ್ಲಿ ಯಶಸ್ವಿಯಾಗುತ್ತವೆ ಎಂದರು.