ನವದೆಹಲಿ: ನೀರಿಕ್ಷೆಯಂತೆ ನಟ ಕಮಲ್ ಹಾಸನ್ ಇಂದು ಮಧುರೈನಲ್ಲಿ ತಮ್ಮ ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದ್ದಾರೆ, ಆ ಮೂಲಕ ಇಂದು ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.



COMMERCIAL BREAK
SCROLL TO CONTINUE READING

ಲಕ್ಷಾಂತರ ಅಭಿಮಾನಿಗಳ ಮಧ್ಯ ಇಂದು ಅಧಿಕೃತವಾಗಿ ಪಕ್ಷದ ಹೆಸರನ್ನು ಘೋಷಿಸಿರುವ ಕಮಲ್ ಹಾಸನ್ ತಮ್ಮ ಪಕ್ಷದ ಹೆಸರನ್ನು 'ಮಕ್ಕಳ್ ನೀಧಿ ಮಯ್ಯಂ' ಎಂದು ಘೋಷಣೆ ಮಾಡಿದ್ದಾರೆ. ಆ ಮೂಲಕ ತಮಿಳುನಾಡು ಮತ್ತೊಮ್ಮೆ ಚಿತ್ರ ನಟರ ರಾಜಕಾರಣದ ಮುಂದುವರೆದ ಹಂತಕ್ಕೆ ಚಾಲನೆ ಸಿಕ್ಕಂತಾಗಿದೆ. ಈ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದಾರೆ.