ಲೋಕಸಭಾ ಚುನಾವಣೆ: ಕ್ರೌಡ್ ಫಂಡಿಂಗ್ ಮೂಲಕ 31 ಲಕ್ಷ ರೂಪಾಯಿ ಸಂಗ್ರಹಿಸಿದ ಕನ್ನಯ್ಯ ಕುಮಾರ್
ಸಿಪಿಐನ ಬೆಗುಸಾರೈ ಅಭ್ಯರ್ಥಿ ಕನ್ನಯ್ಯ ಕುಮಾರ್ ಅವರು ದೇಶದಾದ್ಯಂತ ಕ್ರೌಡ್ ಫಂಡಿಂಗ್ ಮೂಲಕ ಸುಮಾರು 2,400 ಜನರಿಂದ 31 ಲಕ್ಷ ರೂ.ಸಂಗ್ರಹಿಸಿದ್ದಾರೆ.
ನವದೆಹಲಿ: ಸಿಪಿಐನ ಬೆಗುಸಾರೈ ಅಭ್ಯರ್ಥಿ ಕನ್ನಯ್ಯ ಕುಮಾರ್ ಅವರು ದೇಶದಾದ್ಯಂತ ಕ್ರೌಡ್ ಫಂಡಿಂಗ್ ಮೂಲಕ ಸುಮಾರು 2,400 ಜನರಿಂದ 31 ಲಕ್ಷ ರೂ.ಸಂಗ್ರಹಿಸಿದ್ದಾರೆ.
ಈ ಸಂಗ್ರಹದಲ್ಲಿ ಪ್ರಕಾಶಕರೊಬ್ಬರು 5 ಲಕ್ಷ ರೂ ಹಣ ನೀಡಿರುವುದು ಅಧಿಕವೆನ್ನಲಾಗಿದೆ.ಸುಮಾರು 1.500 ಕೊಡುಗೆದಾರರು ರೂ 100 ರಿಂದ 150 ರೂ ಧನ ಸಹಾಯ ಮಾಡಿದ್ದಾರೆ.Our Democracy ಎನ್ನುವ ವೇದಿಕೆಯಿಂದ ಈ ಹಣವನ್ನು ಸಂಗ್ರಹಿಸಲಾಗಿದ್ದು, 70 ಲಕ್ಷ ರೂ ಸಂಗ್ರಹ ಆದ ನಂತರ ಹಣ ಸಂದಾಯವನ್ನು ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ.
ಸಿಪಿಐ ಘಟಕದ ಕಾರ್ಯದರ್ಶಿ ಸತ್ಯ ನಾರಾಯಣ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ "ಸಾಮಾನ್ಯ ಜನರ ಸಹಾಯ ಧನದ ಮೇಲೆ ನಾವು ಅವಲಂಬಿತವಾಗಿದ್ದೇವೆ. ಕನ್ನಯ್ಯ ನಮ್ಮ ಹಳೆಯ ನಿಧಿ ಸಂಗ್ರಹ ವಿಧಾನವನ್ನು ಡಿಜಿಟಲಿಕರಣ ಮಾಡಿದ್ದಾರೆ ಅದು ನಿಜಕ್ಕೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ವಿದೇಶಿ ಸಹಾಯಧನ ಬೇಡವೆಂದು ಹೇಳಿದ್ದೇವೆ ಎಂದರು.
'Our Democracy'ಯ ಸಂಸ್ಥಾಪಕ ಬಿಲಾಲ್ ಜೈದಿ ಅವರು ಮಾತನಾಡಿ "ನಾವು ಮಾರ್ಚ್ 26 ರಂದು ಕನ್ನಯ್ಯ ಕುಮಾರ್ ಗಾಗಿ ನಿಧಿ ಸಂಗ್ರಹವನ್ನು ಪ್ರಾರಂಭಿಸಿದೇವು ಮೊದಲ ದಿನದಂದು 30 ಲಕ್ಷ ರೂ ಬಂದಿದ್ದು. ನಾವು ಇಲ್ಲಿಯವರೆಗೆ 31 ಲಕ್ಷ ಸಂಗ್ರಹಿಸಿದೆ. ಸ್ವಲ್ಪ ಸಮಯದವರೆಗೆ ಸರ್ವರ್ ಡೌನ್ ಆಗಿತ್ತು" ಎಂಡು ಹೇಳಿದರು. ಇದೇ ವೇಳೆ ಹಣ ಸಂದಾಯವು ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಜೈದಿ ಹೇಳಿದರು.