ನವದೆಹಲಿ: ವಿಧ್ಯಾರ್ಥಿ ನಾಯಕ ಕನ್ನಯ್ಯಕುಮಾರ್ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಪ್ರಭಾತ್ ಖಬರ್ ವರದಿ ಮಾಡಿರುವ ಪ್ರಕಾರ ಬಿಹಾರದ ಬೇಗುಸರಾಯಿನಲ್ಲಿ  ಕನ್ನಯ್ಯ ಕುಮಾರ್ ಮಹಾಘಟಬಂಧನ್ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.ಬಿಹಾರದಲ್ಲಿ ಮಹಾಘಟಬಂಧನ್ ಆರ್ ಜೆಡಿ ,ಕಾಂಗ್ರೆಸ್ ,ಎಡಪಕ್ಷ ಮತ್ತು ಇತರ ಸಣ್ಣ ಪಕ್ಷಗಳು ಒಳಗೊಂಡ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ಅದು ವರದಿ ಮಾಡಿದೆ.ಸದ್ಯ ಕನ್ನಯ್ಯ ಕುಮಾರ್ ಟಿಕೆಟ್ ನ್ನು ಸಿಪಿಎಂ ಅಧಿಕೃತವಾಗಿ ಘೋಷಿಸಬೇಕಷ್ಟೇ ಎಂದು ತಿಳಿದು ಬಂದಿದೆ.


ಕನ್ನಯ್ಯಕುಮಾರ್ ಜೆಎನ್ಯು ನ ವಿಧ್ಯಾರ್ಥಿಯಾಗಿದ್ದು ಇತ್ತೀಚೆಗಷ್ಟೇ ಅವರು ತಮ್ಮ ಪಿಎಚ್ಡಿಯನ್ನು ಮುಗಿಸಿದ್ದರು. 2016ರಲ್ಲಿ ಅವರಿಗೆ ದೇಶದ್ರೋಹದ ಕೇಸ್ ಜೊತೆಗೆ 10 ಸಾವಿರ ರೂ ದಂಡವನ್ನು ವಿಧಿಸಲಾಗಿತ್ತು .ತದನಂತರ ದೆಹಲಿ ಹೈಕೋರ್ಟ್ ಜುಲೈ ನಲ್ಲಿ ಈ ಕೇಸ್ ಗೆ ತಡೆಯನ್ನೋಡ್ಡಿತ್ತು.ಈ ಪ್ರಕರಣದಿಂದಾಗಿ ಕನ್ನಯ್ಯಕುಮಾರ್ ಹೆಸರು ವಿದ್ಯಾರ್ಥಿ ಚಳುವಳಿಯಲ್ಲಿ ಮುಂಚೂಣಿಗೆ ಬಂದಿತ್ತು.