ನವದೆಹಲಿ: ಖ್ಯಾತ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಮಾರಕ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾಳೆ. ಸಧ್ಯ ಅವಳನ್ನು ಲಖನೌನ PGI ಆಸ್ಪತ್ರೆಯಲ್ಲಿ ಐಸೋಲೆಶನ್ ನಲ್ಲಿ ಇಡಲಾಗಿದೆ. ಈ ಕುರಿತು ಲಿಖಿತ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆಯ ನಿರ್ದೇಶಕರಾಗಿರುವ ಆರ್.ಕೆ. ಧಿಮಾನ್, ಕನಿಕಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಆಸ್ಪತ್ರೆಯ ಐಸೋಲೆಶನ್ ನಲ್ಲಿ ಭರ್ತಿಯಾಗಿರುವ ಕನಿಕಾ ಓರ್ವ ರೋಗಿಯಂತೆ ವ್ಯವಹರಿಸದೆ, ಸ್ಟಾರ್ ಆಗಿರುವಂತೆ ವ್ಯವಹರಿಸುತ್ತಿದ್ದಾಳೆ. ಅಷ್ಟೇ ಅಲ್ಲ ಕನಿಕಾ ಮಾಡುತ್ತಿರುವ ನಖರಾಗಳಿಂದ ಇಡೀ ಆಸ್ಪತ್ರೆಯ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ. ಅತ್ಯಾವಶ್ಯಕಗಾಗಿರುವ ಸೌಲಭ್ಯಗಳನ್ನೂ ನೀಡಿದರೂ ಕೂಡ ಆಕೆಯ ನಖರಾಗಳು ಮುಂದುವರೆದಿವೆ.


COMMERCIAL BREAK
SCROLL TO CONTINUE READING

ಕನಿಕಾ ಕಪೂರ್ ಮಾರಕ ಕೊರೊನಾ ವೈರಸ್ ದಾಳಿಗೆ ತುತ್ತಾದ ಬಳಿಕ ಜನರಲ್ಲಿ ಭೀತಿಯ ವಾತಾವರಣ ಮೂಡಿದೆ. ಕಳೆದ ಶುಕ್ರವಾರವಷ್ಟೇ ಲಖನೌನಲ್ಲಿ ಕನಿಕಾ ಕಪೂರ್ ಮೇಲೆ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಈ ಟೆಸ್ಟ್ ನಲ್ಲಿ ಅವರು ಪಾಸಿಟಿವ್ ಆಗಿರುವುದು ಗಮನಕ್ಕೆ ಬಂದಿತ್ತು. ವರದಿಗಳ ಪ್ರಕಾರ ಮಾರ್ಚ್ 15ರಂದು ಕನಿಕಾ ಲಂಡನ್ ನಿಂದ ಲಖನೌಗೆ ಮರಳಿದ್ದರು. ಆದರೆ, ಬಳಿಕ ಏರ್ ಪೋರ್ಟ್ ನಲ್ಲಿನ ಅಧಿಕಾರಿಗಳ ಜೊತೆ ಸೇರಿಕೊಂಡು ವಾಶ್ ರೂಮ್ ನಲ್ಲಿ ಅಡಗಿದ್ದ ಕನಿಕಾ ಅಲ್ಲಿಂದ ತಪ್ಪಿಸಿಕೊಂಡಿದ್ದರು.


ಆ ಬಳಿಕ ಕನಿಕಾ ದೇಶಾದ್ಯಂತ ಸುಮಾರು ಮೂರು ಪಾರ್ಟಿಗಳಲ್ಲಿ ಶಾಮೀಲಾಗಿದ್ದಳು. ಕನಿಕಾ ಅವಳ ಈ ಬೇಜವಾಬ್ದಾರಿಯ ಕಾರಣ ಲಖನೌನಲ್ಲಿ ಒಂದಲ್ಲ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಲಾಗಿದೆ. ಅರಿವು ಇದ್ದರೂ ಕೂಡ ಕೊರೊನಾ ಸೋಂಕು ಪಸರಿಸುವ ಆರೋಪ ಕನಿಕಾ ಮೇಲಿದೆ.