Ram Mandir bell Fact check:ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ನಾಯಕರು ಹಿಂದಿನಿಂದಲೂ ಸನಾತನ  ಧರ್ಮದ ವಿರುದ್ದ ಹೇಳಿಕೆಗಳನ್ನು ನೀಡುವುದು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಕರುಣಾನಿಧಿಯವರ ರಾಜಕೀಯದಿಂದ ಹಿಡಿದು ಸ್ಟಾಲಿನ್ ವರೆಗೂ ಸನಾನತನ  ಧರ್ಮವನ್ನು ವಿರೋಧಿಸಿರುವ ಅನೇಕ ಪ್ರಕರಣಗಳು ಕಣ್ಣ ಮುಂದಿವೆ. ಇದೇ ವರ್ಷ ಡಿಎಂಕೆ ಶಾಸಕರು, ಸಚಿವರು, ಸಂಸದರು ಹಾಗೂ ಸ್ವತಃ ಸಿಎಂ ಸ್ಟಾಲಿನ್ ಪುತ್ರ ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದರು. ಇದು ಬಹಳ ದೊಡ್ಡ ವಿವಾದವೂ ಆಗಿತ್ತು. ಅವರ ಹೇಳಿಕೆ ವಿರುದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದವು. ಈ ಮಧ್ಯೆ, ಅಯೋಧ್ಯೆ ರಾಮ ಮಂದಿರಕ್ಕೆ ಸ್ಟಾಲಿನ್ ಕುಟುಂಬದಿಂದ 'ಜೈ ಶ್ರೀ ರಾಮ್' ಎಂದು ಬರೆಯಲಾದ 613 ಕೆಜಿಯ ಗಂಟೆ ಬಂದಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿದೆ.  


COMMERCIAL BREAK
SCROLL TO CONTINUE READING

ಫ್ಯಾಕ್ಟ್ ಚೆಕ್ ನಲ್ಲಿ ತಿಳಿದು ಬಂದಿರುವ ಅಂಶ : ತಮಿಳುನಾಡಿನ ಎಸ್‌ಪಿಇ ಗ್ರೂಪ್‌ನ ಪಿಕೆ ಕನಿಮೊಳಿ ಅವರ ಕುಟುಂಬ ಈ ಗಂಟೆಯನ್ನು ಮಂದಿರಕ್ಕೆ ಅರ್ಪಿಸಿದ್ದಾರೆ ಎನ್ನಲಾಗಿದೆ. ಮೊದಲು ಈ ಗಂಟೆಯನ್ನು ತಮಿಳುನಾಡು ಸಂಸದೆ ಕನಿಮೋಳಿ ಅವರ ಕುಟುಂಬ ಸದಸ್ಯರು ಕಳುಹಿಸಿದ್ದಾರೆ ಎನ್ನುವ ಸುದ್ದಿ ವೇಗವಾಗಿ ಹಬ್ಬಿತ್ತು. ಆದರೆ ನಂತರ ಈ ಗಂಟೆಯನ್ನು ಮಂದಿರಕ್ಕೆ ಅರ್ಪಿಸಿರುವುದು ಸಂಸದೆ ಕನ್ನಿಮೊಳಿ ಕುಟುಂಬ ಅಲ್ಲ ಬದಲಾಗಿ ತಮಿಳುನಾಡಿನ ಎಸ್‌ಪಿಇ ಗ್ರೂಪ್‌ನ ಪಿಕೆ ಕನಿಮೊಳಿ ಅವರ ಕುಟುಂಬ ಎನ್ನುವ ಸತ್ಯಾಂಶ ಬೆಳಕಿಗೆ ಬಂದಿದೆ. 


ಇದನ್ನೂ ಓದಿ : ನಟ-ರಾಜಕಾರಣಿ ವಿಜಯಕಾಂತ್‌ ನಿಧನಕ್ಕೆ ಗಣ್ಯರಿಂದ ಸಂತಾಪ! ಮೋದಿ, ರಾಹುಲ್‌ ಗಾಂಧಿ ಹೇಳಿದ್ದೇನು?


ಗಂಟೆಯಿಂದ ಹೊರ ಹೊಮ್ಮುತ್ತದೆ ಓಂಕಾರ : ಅಯೋಧ್ಯೆ ರಾಮಮಂದಿರಕ್ಕೆ ೬೧೩ ಕೆಜಿ ತೂಕದ ಗಂಟೆಯನ್ನು ಸಮರ್ಪಿಸಲಾಗಿದೆ. ಮಂದಿರಕ್ಕೆ ಅರ್ಪಿಸಲಾದ ಈ ಗಂಟೆಯಲ್ಲಿ ಜೈ ಶ್ರೀ ರಾಮ್' ಎಂದು ಬರೆಯಲಾಗಿದೆ. ತಮಿಳುನಾಡಿನ ರಾಮೇಶ್ವರಂನಿಂದ ಈ ಗಂಟೆಯನ್ನು ಕಳುಹಿಸಿ ಕೊಡಲಾಗಿದೆ. ಈ ಗಂಟೆಯ ತೂಕ ಬರೋಬ್ಬರಿ 613 ಕೆಜಿ. ಈ ಗಂಟೆಯ ವಿಶೇಷತೆಯೆಂದರೆ ಅದನ್ನು ಬಾರಿಸಿದಾಗ, ಓಂಕಾರ ಹೊರಹೊಮ್ಮುತ್ತದೆ.


ಶ್ರೀರಾಮನು ಲಂಕಾವನ್ನು ವಶಪಡಿಸಿಕೊಳ್ಳುವ ಮೊದಲು ರಾಮೇಶ್ವರಂನಲ್ಲಿ ಶಿವಲಿಂಗವನ್ನು ಸ್ಥಾಪಿಸಿದ್ದ ಎಂದು ಹೇಳುತ್ತದೆ ಪುರಾಣ. ರಾಮ ಮತ್ತು ಮಹಾದೇವರ ನಡುವಿನ ಸಂಬಂಧವು ಪೂಜಕ ಮತ್ತು ಆರಾಧಕನ ಸಂಬಂಧವಾಗಿದೆ. ಆದ್ದರಿಂದ ರಾಮಮಂದಿರದಲ್ಲಿನ ಈ ಗಂಟೆಯಿಂದ ಹೊರಹೊಮ್ಮುವ ಓಂ ಶ್ರೀರಾಮನ ನೆಲೆಯಲ್ಲಿ ಅವರ ಆರಾಧ್ಯ ದೈವವಾದ  ಮಹಾದೇವನ ಉಪಸ್ಥಿತಿಯನ್ನು ಕೂಡಾ ಪ್ರತಿಧ್ವನಿಸುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Ayodhya: ರಾಮನಗರಿಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ ಯೋಗಿ ಸರ್ಕಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.