ಕನ್ನೌಜ್: ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ಶುಕ್ರವಾರ, ಫರೂಕಾಬಾದ್‌ನಿಂದ ಜೈಪುರಕ್ಕೆ ಹೋಗುತ್ತಿದ್ದ ಸ್ಲೀಪರ್ ಬಸ್‌ ಟ್ರಕ್ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಟ್ರಕ್ ಮತ್ತು ಬಸ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಈ ಅಪಘಾತದಲ್ಲಿ, ಬಸ್‌ನಲ್ಲಿದ್ದ 21 ಜನರು ಮೃತ ಪಟ್ಟಿದ್ದಾರೆ. ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಗಾಯಗೊಂಡವರ ಚಿಕಿತ್ಸೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಕನ್ನೌಜ್‌ನ ಡಿಎಂ ಮತ್ತು ಎಸ್‌ಪಿಗೆ ಸೂಚನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಸ್‌ನಲ್ಲಿ ಸುಮಾರು 45 ಜನರಿದ್ದರು ಎಂದು ಹೇಳಲಾಗುತ್ತಿದೆ. ಈ ಅಪಘಾತದ ನಂತರ, ಬೆಂಕಿಯಲ್ಲಿ ಬಸ್‌ನಲ್ಲಿದ್ದ  21 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಈ ಅಪಘಾತದಲ್ಲಿ 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ತಿರ್ವಾ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.


ಅಪಘಾತದ ನಂತರ, ಪರಿಹಾರ ಕಾರ್ಯ ಮತ್ತು ರಕ್ಷಣೆಗೆ ಸೂಚನೆಗಳನ್ನು ನೀಡಲಾಗಿದೆ. ಅಪಘಾತವು ನೋವಿನಿಂದ ಕೂಡಿದ್ದು, ಗಾಯಾಳುಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಮೊದಲ ಆದ್ಯತೆಯೆಂದರೆ ಅಪಘಾತದಲ್ಲಿ ಗಾಯಗೊಂಡಿರುವವರ ಜೀವಗಳನ್ನು ಉಳಿಸುವುದು. ಬಸ್‌ನ ಬೆಂಕಿ ಸಂಪೂರ್ಣವಾಗಿ ನಂದಿಸಲಾಗಿದೆ. ಭೀಕರ ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಮೃತ ದೇಹಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಡಿಎನ್‌ಎ ಪರೀಕ್ಷೆನಡೆಸಲಾಗುವುದು. ತನಿಖಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅದೇ ಸಮಯದಲ್ಲಿ, ವಿಧಿವಿಜ್ಞಾನ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಉತ್ತರ ಪ್ರದೇಶ ಡಿಜಿಪಿ ಒಪಿ ಸಿಂಗ್ ಅವರು ಝೀ ಮೀಡಿಯಾಕ್ಕೆ ತಿಳಿಸಿದರು.


ಯುಪಿ ಡಿಜಿಪಿ ಒಪಿ ಸಿಂಗ್ ಅವರು ಬಸ್-ಟ್ರಕ್ ಎರಡೂ ವಾಹನಗಳಲ್ಲಿ ಒಂದರಲ್ಲಿ ಸ್ಫೋಟ ಇದ್ದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಇದರಿಂದಾಗಿ ಸ್ಫೋಟ ಸಂಭವಿಸಿದ ಎಂದು ಶಂಕಿಸಿದ್ದಾರೆ. ಕಾನ್ಪುರ ಎಡಿಜಿ ವಲಯ ಪ್ರೇಂಪ್ರಕಾಶ್ ಅವರನ್ನು ಸ್ಥಳದಲ್ಲೇ ಕಳುಹಿಸಲಾಗಿದೆ ಎಂದವರು ಹೇಳಿದರು.


ಪ್ರತ್ಯಕ್ಷದರ್ಶಿಗಳ ಪ್ರಕಾರ, ಜಿಬಿ ರಸ್ತೆಯ ವಿಲೇಜ್ ಘಿಲೊಯ್ ಬಳಿ ಮಂಜುಗಡ್ಡೆಯಿಂದ ಭೀಕರ ಅಪಘಾತ ಸಂಭವಿಸಿದೆ. ಟ್ರಕ್‌ನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಅದು ಬಸ್‌ನನ್ನೂ ಆವರಿಸಿದೆ. ಬಸ್ ಅಲ್ಪಾವಧಿಯಲ್ಲಿಯೇ ಬೆಂಕಿಯ ಚೆಂಡಾಗಿ ಮಾರ್ಪಟ್ಟಿತು. ಅಪಘಾತವು ತುಂಬಾ ಭೀಕರವಾಗಿತ್ತು, ಸ್ಲೀಪರ್ ಬಸ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರಿಗೆ ಹೊರಗೆ ಬರಲೂ ಕೂಡ ಅವಕಾಶ ಸಿಗಲಿಲ್ಲ. ಹೇಗಾದರೂ ಸುಮಾರು ಒಂದು ಡಜನ್ ಸವಾರರು ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡರು ಎಂದು ಮಾಹಿತಿ ನೀಡಿದ್ದಾರೆ.