ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂಬೈಯಲ್ಲಿ ಶನಿವಾರದಂದು ಭಾರತದ ಮೊದಲ ಸಿನಿಮಾ ಮ್ಯೂಸಿಯಂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಹಾಗೂ ಇನ್ನಿತರ ಸಿನಿ ದಿಗ್ಗಜರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


COMMERCIAL BREAK
SCROLL TO CONTINUE READING

ಈ ಕಾರ್ಯಕ್ರಮದ ನಂತರ ಕಪಿಲ್ ಟ್ವಿಟ್ಟರ್ನಲ್ಲಿ  ಟ್ವೀಟ್ ಮಾಡಿ , "ಗೌರವಾನ್ವಿತ ಪ್ರಧಾನಿ  ನರೇಂದ್ರ ಮೋದಿಜಿ , ನಮ್ಮ ಚಿತ್ರೋದ್ಯಮ ಮತ್ತು ನಮ್ಮ ರಾಷ್ಟ್ರದ ಬಗೆಗಿನ ನಿಮ್ಮ ವಿಚಾರಗಳು ಮತ್ತು ಅಭಿಪ್ರಾಯಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಸಭೆ ಫಲಪ್ರದವಾಗಿತ್ತು . ಸರ್ ನಾನು ನಿಮಗೆ ಹೇಳುವುದಿಷ್ಟೇ  ನಿಮಗೆ ಉತ್ತಮ ಹಾಸ್ಯ ಪ್ರಜ್ಞೆಯೂ ಕೂಡ ಇದೆ, ಅಭಿನಂದನೆಗಳು. " ಎಂದು ಟ್ವೀಟ್ ಮೂಲಕ ತಿಳಿಸಿದ್ದರು.



ಕಪಿಲ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಭಾನುವಾರದಂದು, ಕಪಿಲ್ ಶರ್ಮಾ ಅವರು ಯಾರಾದರೂ ವ್ಯಕ್ತಿಯ ಹಾಸ್ಯವನ್ನು ಮೆಚ್ಚಿಕೊಂಡಾಗ, ಆ ವ್ಯಕ್ತಿಯು ಖುಷಿಪಡುತ್ತಾನೆ ಮತ್ತು ನಾನು ಕೂಡ ಇದಕ್ಕೆ ಹೊರತಾಗಿಲ್ಲ. ಧನ್ಯವಾದಗಳು ಕಪಿಲ್ ,ಇಂತಹ ಮಾತುಗಳಿಗೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.


ಕೆಲವು ದಿನಗಳ ಹಿಂದೆ ಚಲನಚಿತ್ರೋದ್ಯಮದ ಬಗ್ಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವ ವಿಚಾರವಾಗಿ ಬಾಲಿವುಡ್ ನ ಪ್ರಮುಖ ನಟ, ನಟಿಯರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಅದರಲ್ಲಿ ರಣವೀರ್ ಸಿಂಗ್, ರಣಬೀರ್ ಕಪೂರ್, ಅಲಿಯಾ ಭಟ್, ಕರಣ್ ಜೋಹರ್, ರೋಹಿತ್ ಶೆಟ್ಟಿ, ಸಿಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಭೂಮಿ ಪದ್ನೇಕರ್, ಏಕ್ತಾ ಕಪೂರ್, ಮುಂತಾದವರು ಆ ನಿಯೋಗದಲ್ಲಿ ಉಪಸ್ಥಿತರಿದ್ದರು.