ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಆರ ಅಂತ್ಯಕ್ರಿಯೆ ಮರೀನಾ ಬೀಚ್‌ನಲ್ಲಿ ನಡೆಸಲು ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್ನ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.



COMMERCIAL BREAK
SCROLL TO CONTINUE READING

ಮರೀನಾ ಬೀಚ್‌ನಲ್ಲಿ ಅಣ್ಣಾದೊರೈ ಸಮಾಧಿ ಪಕ್ಕದಲ್ಲೇ ಕರುಣಾನಿಧಿ ಅವರ ಅಂತ್ಯಕ್ರಿಯೆ ನಡೆಸಬೇಕು ಎಂಬ ಡಿಎಂಕೆ ಬೇಡಿಕೆಯನ್ನು ಎತ್ತಿ ಹಿಡಿದಿರುವ ಮದ್ರಾಸ್‌ ಹೈಕೋರ್ಟ್ ಮರೀನಾ ಬೀಚ್‌ನಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವ ಕುರಿತು ಸಲ್ಲಿಕೆಯಾಗಿದ್ದ 6 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾ ಮಾಡಿತು.


ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಹಾಗೂ ಕಾನೂನು ತೊಡಕು ಮುಂದೊಡ್ಡಿ ಮುಖ್ಯಮಂತ್ರಿ ಇ. ಪಳನಿಸ್ವಾಮಿಯವರು ಮರೀನಾ ಬೀಚ್‌ನಲ್ಲಿ  ಮರೀನಾ ಬೀಚ್‌ ಬಳಿಯ ಅಣ್ಣ ಮೆಮರಿಯಲ್‌ನಲ್ಲಿ ಕರುಣಾನಿಧಿ ಸಮಾಧಿಯನ್ನು ನಿರಾಕರಿಸಿದ್ದರು. ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅಲ್ಲದೆ, ಸಮಾಧಿ ಮಾಡಲು ಅವಕಾಶ ನೀಡಬಾರದು ಎಂದು ಟ್ರಾಫಿಕ್‌ ರಾಮಸ್ವಾಮಿ ಸೇರಿದಂತೆ ಐವರು ಹೈ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಐವರೂ ಅರ್ಜಿಗಳನ್ನು ವಾಪಾಸ್‌ ಪಡೆದಿದ್ದರು. 


ಮಂಗಳವಾರ ರಾತ್ರಿ ಅರ್ಜಿಯ ವಿಚಾರಣೆ ಆರಂಭಿಸಿದ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಚ್‌.ಜಿ. ರಮೇಶ್ ಮತ್ತು ಎಸ್‌.ಎಸ್‌. ಸುಂದರ್ ನೇತೃತ್ವದ ಪೀಠವು ಸರ್ಕಾರ ಹಾಗೂ ಡಿಎಂಕೆಯ ವಾದವನ್ನು ಆಲಿಸಿದ ಬಳಿಕ ವಿಚಾರಣೆಯನ್ನು ಬೆಳಗ್ಗೆ 8 ಗಂಟೆಗೆ ಮುಂದೂಡಿತ್ತು. ಬೆಳಿಗ್ಗೆ ಎರಡು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿ ಹುಲವಾಡಿ ರಮೇಶ್ ಪೀಠವು, ಕಲೈನರ್​ ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಮರಿನಾ ಬೀಚ್​ನಲ್ಲಿ ನೆರವೇರಿಸಲು ಅವಕಾಶ ನೀಡಿ ತೀರ್ಪು ಪ್ರಕಟಿಸಿದೆ.


ಮರೀನಾ ಬೀಚ್ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆಗೆ ಅವಕಾಶ ನೀಡುವಂತೆ ಮದ್ರಾಸ್ ಹೈಕೋರ್ಟ್ ತೀರ್ಪು ಪ್ರಕಟವಾದ ಕೂಡಲೇ ಕರುಣಾನಿಧಿ ಪುತ್ರ ಸ್ಟಾಲಿನ್ ಕಣ್ಣಿರು ಹಾಕಿ ಕೈ ಮುಗಿದರು.