ಮಹಿಳೆಯರ ರಕ್ಷಣೆಗಾಗಿ ಬೆಸ-ಸಮ ಯೋಜನೆಯನ್ನು ಹಿಂತೆಗೆದುಕೊಂಡ ಕೇಜ್ರಿವಾಲ್
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಯೋಜನೆಯ ಶಿಫಾರಸ್ಸುಗಳಿಗೆ ವಿನಾಯಿತಿ ನೀಡಲು ನಿರಾಕರಿಸಿದ ಬಳಿಕ ದೆಹಲಿ ಸರ್ಕಾರ ಶನಿವಾರ ಬೆಸ-ಸಮ ಯೋಜನೆಯನ್ನು ಹಿಂತೆಗೆದುಕೊಂಡಿದೆ.
ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಬೆಸ-ಸಮ ಯೋಜನೆಗೆ ದೆಹಲಿ ಸರ್ಕಾರ ಮಾಡಿದ್ದ ಶಿಫಾರಸ್ಸುಗಳಿಗೆ ವಿನಾಯಿತಿ ನೀಡಲು ನಿರಾಕರಿಸಿದ ಬಳಿಕ ದೆಹಲಿ ಸಿಎಂ ಕೇಜ್ರಿವಾಲ್, ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿ ಈ ಯೋಜನೆಯನ್ನು ಹಿಂತೆಗೆದುಕೊಂಡಿದ್ದಾರೆ.
"ದ್ವಿಚಕ್ರ ವಾಹನಗಳು ಮತ್ತು ಮಹಿಳೆಯರಿಗೆ ನೀಡಿದ್ದ ರಿಯಾಯಿತಿಯನ್ನು NGT ಮಾನ್ಯ ಮಾಡದ ಕಾರಣ ದೆಹಲಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. "ಮಹಿಳೆಯರ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧವಾಗಿಲ್ಲ" ಎಂದು ತಿಳಿಸಿರುವ ದೆಹಲಿ ಸಾರಿಗೆ ಮಂತ್ರಿ ಕೈಲಾಶ್ ಗೆಹ್ಲೋಟ್, ಈ ಕುರಿತಂತೆ ಮತ್ತೆ ಮರು ಪರಿಶೀಲನೆ ನಡೆಸುವಂತೆ ಸೋಮವಾರ ಸೋಮವಾರ NGT ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ನವೆಂಬರ್ 13 ರಿಂದ 17 ರ ವರೆಗೆ ರಾಜ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟವನ್ನು ನಿಗ್ರಹಿಸಲು ದೆಹಲಿ ಸರ್ಕಾರವು ಕಾರ್ ಗಳಿಗೆ ಬೆಸ-ಸಮ ಯೋಜನೆಯ ಅನುಷ್ಠಾನವನ್ನು ಪ್ರಕಟಿಸಿದೆ.