Kerala Blast Dubai Connection : ಕೇರಳದ ಎರ್ನಾಕುಲಂನಲ್ಲಿ ಒಂದರ ಹಿಂದೆ ಒಂದರಂತೆ ಸಂಭವಿಸಿದ ಸ್ಫೋಟಗಳಿಂದ ತತ್ತರಿಸಿದೆ. ಮೂರು ಬಾಂಬ್ ಸ್ಫೋಟಗಳ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿ ಪೊಲೀಸರೆದುರು ಶರಣಾಗಿದ್ದಾನೆ. ಈ ನಡುವೆ ಕೇರಳದಲ್ಲಿ ನಡೆದ ಸ್ಫೋಟದ ದುಬೈ ನಂಟು ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಹೊಣೆ ಹೊತ್ತು  ಶರಣಾದ ಆರೋಪಿ :
ಬಾಂಬ್ ಸ್ಫೋಟದ ಹೊಣೆ ಹೊತ್ತು ಕೊಚ್ಚಿ ನಿವಾಸಿ ಡೊಮಿನಿಕ್ ಮಾರ್ಟಿನ್ ಪೊಲೀಸರ ಮುಂದೆ ಶರಣಾಗಿದ್ದಾನೆ. ನಾನೇ ಬಾಂಬ್ ಇಟ್ಟಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಮಾರ್ಟಿನ್ ಫೇಸ್‌ಬುಕ್‌ನಲ್ಲಿ ಲೈವ್ ಬರುವ ಮೂಲಕ ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕನ್ವೆನ್ಷನ್ ಸೆಂಟರ್‌ನಲ್ಲಿ ತಾನು ಮೂರು ಬಾಂಬ್‌ಗಳನ್ನು ಇಟ್ಟಿದ್ದೇನೆ ಎಂದು ಡೊಮಿನಿಕ್ ಹೇಳಿಕೊಂಡಿದ್ದಾನೆ. ನಂತರ ಭಾನುವಾರ ಬೆಳಿಗ್ಗೆ ಪ್ರಾರ್ಥನಾ ಸಭೆಯಲ್ಲಿ ಸ್ಫೋಟ ಸಂಭವಿಸಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ.


ಇದನ್ನೂ ಓದಿ : Daily GK Quiz: ಯಾವ ವರ್ಷದಲ್ಲಿ ಮೊದಲ ಐಫೋನ್ ಬಿಡುಗಡೆ ಮಾಡಲಾಯಿತು?


ಕೇರಳ ಸ್ಫೋಟಕ್ಕೂ ದುಬೈ ನಂಟು : 
ಈ ನಡುವೆ ಕೇರಳದಲ್ಲಿ ನಡೆದ ಸ್ಫೋಟದ ದುಬೈ ನಂಟು ಬೆಳಕಿಗೆ ಬಂದಿದೆ. ಶಂಕಿತ ಆರೋಪಿ ಡೊಮಿನಿಕ್ ಮಾರ್ಟಿನ್ 2 ತಿಂಗಳ ಹಿಂದೆ ದುಬೈನಿಂದ ಭಾರತಕ್ಕೆ ಬಂದಿದ್ದ ಎಂದು ಹೇಳಲಾಗುತ್ತಿದೆ. ಡೊಮಿನಿಕ್ ಸುಮಾರು 15 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಅಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಭಾರತಕ್ಕೆ ಬಂದು ಟ್ಯೂಷನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ.  ಡೊಮಿನಿಕ್‌ಗೆ ಇಬ್ಬರು ಮಕ್ಕಳಿದ್ದು, ಅವರು ವಿದೇಶದಲ್ಲಿದ್ದಾರೆ. 


ಮಾರ್ಟಿನ್ ಕೇವಲ ದಾಳವಾದರೆ ಮಾಸ್ಟರ್ ಮೈಂಡ್ ಯಾರು ?:
ಇದೀಗ ಈ ವಿಷಯವಾಗಿ ಡೊಮಿನಿಕ್ ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸ್ಫೋಟದ ನಂತರ, ತನಿಖಾ ಸಂಸ್ಥೆಗಳು ಡೊಮಿನಿಕ್ ಮಾರ್ಟಿನ್ ಅವರ  ಹಿನ್ನೆಲೆ ಬಗ್ಗೆ ತನಿಖೆ ಮಾಡುತ್ತಿದ್ದಾರೆ.  ಮಾರ್ಟಿನ್ ಕೇವಲ ದಾಳವಾಗಿದ್ದು, ಈ ಸ್ಫೋಟದ ಹಿಂದೆ ಇರುವವರು ಯಾರು ಎನ್ನುವುದನ್ನು ಪತ್ತೆ ಹಚ್ಚಬೇಕಿದೆ. 


ಇದನ್ನೂ ಓದಿ : Daily GK Quiz: ಯಾವುದೇ ಒಬ್ಬ ವ್ಯಕ್ತಿಯು ಸಾವಿನ ನಂತರವೂ ಮಾಡಬಹುದಾದ ಕೆಲಸ ಯಾವುದು..?


ಸ್ಫೋಟದಲ್ಲಿ ಸತ್ತವರ ಸಂಖ್ಯೆ ಮೂರಕ್ಕೆ ಏರಿದೆ :
ಕೇರಳದ ಕಲಮಸ್ಸೆರಿಯಲ್ಲಿರುವ ಕ್ರಿಶ್ಚಿಯನ್ ಸಮುದಾಯದ  ಮೂರು ದಿನಗಳ ಪ್ರಾರ್ಥನಾ ಸಭೆಯ ಸಮಾರೋಪದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಸಂಖ್ಯೆ ಮೂರಕ್ಕೆ ಏರಿದೆ. ನಾಲ್ವರು ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಎರ್ನಾಕುಲಂ ಜಿಲ್ಲೆಯ ಮಲಯತ್ತೂರಿನ ನಿವಾಸಿ ಲಿಬಿನಾ ಎಂಬ 12 ವರ್ಷದ ಬಾಲಕಿ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಮಹಿಳೆಯರು ಭಾನುವಾರ ಮೃತಪಟ್ಟಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.