ದೇಶದ ಮೊದಲ ರೋಬೋಟ್ ಪೊಲೀಸ್ ಉದ್ಘಾಟಿಸಿದ ಕೇರಳ ಸಿಎಂ
ಕೆಪಿ-ಬೋಟ್, ಹ್ಯೂಮನಾಯ್ಡ್ ಪೊಲೀಸ್ ರೋಬೋ(ಮಾನವರ ಜತೆ ಸಂಭಾಷಣೆ ನಡೆಸುವಂಥ ಯಂತ್ರ ಮಾನವ) ಪೊಲೀಸ್ ಪ್ರಧಾನ ಕಛೇರಿಯ ಮುಂಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತದೆ.
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮಂಗಳವಾರ ಕೇರಳ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕೆಪಿ-ಬೋಟ್ ಉದ್ಘಾಟಿಸಿದರು. ಇದು ದೇಶದ ಮೊದಲ ರೋಬೋಟ್ ಪೊಲೀಸ್ ಆಗಿದೆ.
ವರದಿಗಳ ಪ್ರಕಾರ, ಕೆಪಿ-ಬೋಟ್ ಪೊಲೀಸ್ ಪ್ರಧಾನ ಕಛೇರಿಯ ಮುಂಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತದೆ. ಇದು ಸಂದರ್ಶಕರನ್ನು ಸ್ವೀಕರಿಸುವುದು ಮತ್ತು ಅವರ ಅಗತ್ಯತೆಗಳಿಗೆ ಅನುಗುಣವಾಗಿ ಅವರಿಗೆ ನಿರ್ದೇಶಿಸುವ ಕಾರ್ಯ ನಿರ್ವಹಿಸಲಿದೆ.
ಆದಾಗ್ಯೂ, ಹ್ಯೂಮನಾಯ್ಡ್ ಪೊಲೀಸ್ ರೋಬೋ(ಮಾನವರ ಜತೆ ಸಂಭಾಷಣೆ ನಡೆಸುವಂಥ ಯಂತ್ರ ಮಾನವ) ಯಾವುದೇ ಮಾನವ ಸಂಪನ್ಮೂಲಗಳನ್ನು ಬದಲಿಸುವುದಿಲ್ಲ. ಬದಲಿಗೆ, ಅದೊಂದು ಮೊದಲ ಸಂಪರ್ಕ ಬಿಂದುವಾಗಿ ಮತ್ತು ಅಗತ್ಯ ದತ್ತಾಂಶವನ್ನು ಸಂಗ್ರಹಿಸಲು ಒಂದು ಉಪಕರಣವನ್ನಾಗಿ ಬಳಸಿಕೊಳ್ಳಬಹುದು. ಇದರಿಂದ ಒಟ್ಟಾರೆ ಸೇವಾ ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಬಹುದು.
"ಇತ್ತೀಚೆಗೆ ಕೃತಕ ಬುದ್ಧಿಮತ್ತೆ (Artificial Intelligence) ಬೆಳವಣಿಗೆಗಳೊಂದಿಗೆ, ನಾವು ಮಾಹಿತಿ ನೆರವು, ಭೌತಿಕ ನೆರವು, ಕಣ್ಗಾವಲು ಮುಂತಾದ ಕಾರ್ಯಗಳನ್ನು ನಿರ್ವಹಿಸುವ ಬುದ್ಧಿವಂತ ರೋಬೋಟ್ಗಳ ಆಗಮನವನ್ನು ನೋಡುತ್ತಿದ್ದೇವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಪರಿಸರದ ಮಾಹಿತಿಯನ್ನು ಸಂಗ್ರಹಿಸುವ ಸಂವೇದಕಗಳ ವ್ಯಾಪ್ತಿಯೊಂದಿಗೆ, ಕೆಪಿ-ಬೋಟ್ ಮಾನವರ ಜೊತೆಯಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಹೆಚ್ಚುವರಿ ನಿರ್ದೇಶಕ ಜನರಲ್ ಆಫ್ ಪೋಲಿಸ್ (ಎಡಿಜಿಪಿ) ಮನೋಜ್ ಅಬ್ರಹಾಂ ಹೇಳಿದರು.