ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್ ಪ್ರಸ್ತಾಪ ತಳ್ಳಿ ಹಾಕಿದ ಸಿಎಂ ಪಿಣರಾಯಿ ವಿಜಯನ್
ಕೋವಿಡ್ -19 ಪ್ರಕರಣಗಳ ಏರಿಕೆ ಹಿನ್ನಲೆಯಲ್ಲಿ ಈಗ ಕೇರಳದ ಸರ್ಕಾರ ತೀವ್ರ ಟೀಕೆಯನ್ನು ಎದುರಿಸುತ್ತಿದೆ, ಇದೆ ಸಂದರ್ಭದಲ್ಲಿ ಈಗ ಕೇರಳ ಸಿಎಂ ಪಿನರಾಯಿ ವಿಜಯನ್ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ.
ತಿರುವನಂತಪುರಂ: ಕೋವಿಡ್ -19 ಪ್ರಕರಣಗಳ ಏರಿಕೆ ಹಿನ್ನಲೆಯಲ್ಲಿ ಈಗ ಕೇರಳದ ಸರ್ಕಾರ ತೀವ್ರ ಟೀಕೆಯನ್ನು ಎದುರಿಸುತ್ತಿದೆ, ಇದೆ ಸಂದರ್ಭದಲ್ಲಿ ಈಗ ಕೇರಳ ಸಿಎಂ ಪಿನರಾಯಿ ವಿಜಯನ್ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ.
ಲಾಕ್ ಡೌನ್ ವಿಧಿಸುವುದರಿಂದಾಗಿ ಆರ್ಥಿಕತೆ ಮತ್ತು ಜೀವನೋಪಾಯಕ್ಕೆ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ.ಪ್ರತಿಯೊಬ್ಬರೂ ಕ್ವಾರಂಟೈನ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
'ರಾಜ್ಯದಾದ್ಯಂತ ಮತ್ತೊಂದು ಲಾಕ್‌ಡೌನ್ ಅನ್ನು ಯಾರೂ ಬಯಸುವುದಿಲ್ಲ, ಏಕೆಂದರೆ ಅದರ ಅನುಷ್ಠಾನವು ಆರ್ಥಿಕತೆ ಮತ್ತು ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ಸಿಎಂ ಹೇಳಿದರು.
ಇದನ್ನೂ ಓದಿ:"ಕೇರಳ ಬಿಜೆಪಿಗೆ ಸ್ಥಳವಲ್ಲ, ಕೋಮುವಾದ ಅಥವಾ ಧಾರ್ಮಿಕ ವಿಭಜನೆಯನ್ನು ಸ್ವೀಕರಿಸುವುದಿಲ್ಲ"
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸುವಂತೆ ರಾಜ್ಯದ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳನ್ನು ಸಿಎಂ ಕೇಳಿದ್ದಾರೆ ಮತ್ತು ವೈರಸ್ ಹರಡುವುದನ್ನು ಪರೀಕ್ಷಿಸಲು ನೆರೆಹೊರೆಯ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.
ರಾಜ್ಯವ್ಯಾಪಿ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಿಎಂ ವಿಜಯನ್ (Pinarayi Vijayan), ಪರೀಕ್ಷಾ ಸಕಾರಾತ್ಮಕತೆ ದರವು 18-20 ಪ್ರತಿಶತದಷ್ಟು ಇದ್ದಾಗಲೂ ಪ್ರಕರಣದ ಸಾವಿನ ಪ್ರಮಾಣವನ್ನು ಶೇಕಡಾ 0.5 ರಷ್ಟನ್ನು ಉಳಿಸಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಯಿತು ಎಂದು ಹೇಳಿದರು.
ಇದನ್ನೂ ಓದಿ:"ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ"
"ಸರ್ಕಾರಿ ಅಧಿಕಾರಿಗಳು, ಸ್ವಯಂಸೇವಕರು, ನಿವಾಸಿ ಸಂಘಗಳನ್ನು ಒಳಗೊಂಡ ನೆರೆಹೊರೆಯ ಸಮಿತಿಗಳನ್ನು ಕೋವಿಡ್ -19 ತಗ್ಗಿಸುವಿಕೆಗಾಗಿ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಹರಡುವಿಕೆಯನ್ನು ಕಡಿಮೆ ಮಾಡಲು ಮಧ್ಯಪ್ರವೇಶಿಸಬೇಕು.ನೆರೆಹೊರೆಯ ಸಮಿತಿಗಳು, ಕ್ಷಿಪ್ರ ಪ್ರತಿಕ್ರಿಯೆ ತಂಡ, ವಾರ್ಡ್ ಮಟ್ಟದ ಸಮಿತಿಗಳು, ಪೊಲೀಸರು ಮತ್ತು ವಲಯ ಮ್ಯಾಜಿಸ್ಟ್ರೇಟ್‌ಗಳು ನಿರ್ಬಂಧಗಳನ್ನು ಜಾರಿಗೊಳಿಸಬೇಕು ಮತ್ತು ಹರಡುವಿಕೆಯನ್ನು ನಿಯಂತ್ರಿಸಬೇಕು "ಎಂದು ವಿಜಯನ್ ಹೇಳಿದರು.
ಇದನ್ನೂ ಓದಿ:ಆಫ್ಘಾನ್ ನಿಂದ ಜನರನ್ನು ಭಾರತಕ್ಕೆ ಸ್ಥಳಾಂತರಿಸುವ ಕೇಂದ್ರದ ಕಾರ್ಯ ಶ್ಲಾಘನೀಯ -ಪಿಣರಾಯಿ ವಿಜಯನ್
ಪಾಸಿಟಿವ್ ರೋಗಿಯ ಸಂಪರ್ಕಕ್ಕೆ ಬಂದವರನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ಮಾಡಿದಂತೆ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು, ನಾಯಕರು ಮತ್ತು ಅಧಿಕಾರಿಗಳನ್ನು ಒಟ್ಟಾಗಿ ಕೆಲಸ ಮಾಡುವಂತೆ ಕೇಳಿಕೊಂಡರು.
"ನಾವು ಈಗಾಗಲೇ ಶೇ .74 ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ಮತ್ತು ಶೇ 27 ರಷ್ಟು ಜನರಿಗೆ ಎರಡನೇ ಡೋಸ್ ನೀಡಿದ್ದೇವೆ. ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರಿಗೆ ಮೊದಲ ಡೋಸ್ ಲಸಿಕೆ ನೀಡಲಾಯಿತು ಮತ್ತು ಅವರಲ್ಲಿ ಶೇ. 86 ರಷ್ಟು ಕಾರ್ಯಕರ್ತರು ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಹೇಳಿದರು.
"ಶುಕ್ರವಾರದಂದು 29,322 ಹೊಸ ಪ್ರಕರಣಗಳು ಮತ್ತು 131 ಸಾವುಗಳನ್ನು ವರದಿ ಮಾಡುವ ಮೂಲಕ ಕೇರಳವು ದಾಖಲೆಯ ಸಂಖ್ಯೆಯ ಕೋವಿಡ್ -19 ಸೋಂಕುಗಳನ್ನು ದಾಖಲಿಸುತ್ತಿದೆ.ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಒಟ್ಟು ಸಾವಿನ ಸಂಖ್ಯೆ 21,280 ಕ್ಕೆ ಏರಿದೆ. ಎರಡನೇ ತರಂಗದ ನಂತರ ದೇಶದ ಇತರ ಭಾಗಗಳಲ್ಲಿ ಕೋವಿಡ್ -19 ಪ್ರಕರಣಗಳು ಕಡಿಮೆಯಾದ ಸಮಯದಲ್ಲಿ, ಕೇರಳವು ಕಳೆದ ಹಲವು ದಿನಗಳಿಂದ ಭಾರತದ ತಾಜಾ ದೈನಂದಿನ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.