ತಿರುವನಂತಪುರಂ: ಮುಂಗಾರು ಮಳೆಯ ಆರ್ಭಟ ಹಾಗೂ ಭೀಕರ ಪ್ರವಾಹದಿಂದಾಗಿ ಕೇರಳ ರಾಜ್ಯ ತತ್ತರಿಸಿದೆ. ದೇವರನಾಡಲ್ಲಿ 'ವರುಣ' ಮೃದಂಗಕ್ಕೆ ಈವರೆಗೂ 67 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ರಾಜ್ಯದ 12 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು, ಮುಲ್ಲಪೆರಿಯಾರ್ ಡ್ಯಾಮ್ ನ ನೀರಿನ ಪ್ರಮಾಣವನ್ನು ತಗ್ಗಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಮುಲ್ಲಾಪೆರಿಯಾರ್ ಡ್ಯಾಮ್ ನಲ್ಲಿ ಪ್ರಸ್ತುತ ಇರುವ 142 ಅಡಿ ನೀರಿನ ಪ್ರಮಾಣವನ್ನು, 139 ಅಡಿಗೆ ತಗ್ಗಿಸುವಂತೆ ಕೇರಳ ಸಿಎಂ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದಾರೆ.  


ಕೇರಳಕ್ಕೆ ಸರ್ವ ನೆರವು ನೀಡಲು ಸಿದ್ಧ-ಪ್ರಧಾನಿ
ಮಳೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್‌ ಮಾತುಕತೆ ನಡೆಸಿದ್ದು, ಪ್ರಯಾಣಿಕರ ಅನುಕೂಲಕ್ಕೆ ಲಘು ವಿಮಾನಗಳ ಬಳಕೆಗೆ ಪರವಾನಿಗೆ ನೀಡುವಂತೆ ಪಿಣರಾಯ್ ವಿಜಯನ್ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೇರಳಕ್ಕೆ ಸರ್ವ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.


ವಿಮಾನ ನಿಲ್ದಾಣದ ಸಮೀಪವಿರುವ ಚೆಂಗಲ್ತೋಡು ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಕೊಚ್ಚಿ ವಿಮಾನನಿಲ್ದಾಣದಲ್ಲಿ ಆಗಸ್ಟ್ 18 ರ ಶನಿವಾರ ಮಧ್ಯಾಹ್ನ 2 ಗಂಟೆವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಿಸಿದೆ.