Kerala HC: ಅರೆನಗ್ನ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರಿಗೆ ಕೇರಳ ಹೈಕೋರ್ಟ್ ಸೋಮವಾರ ಬಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದೆ. ರೆಹಾನಾ ತನ್ನ ಅಪ್ರಾಪ್ತ ಮಗ ಮತ್ತು ಮಗಳ ಕೈಯಿಂದ ಅರೆ ನಗ್ನವಾಗಿ ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಳು. ಇದಾದ ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ವೀಡಿಯೊ ವೈರಲ್ ಆದ ನಂತರ, ಪೋಕ್ಸೊ, ಬಾಲ ನ್ಯಾಯ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಪೋಕ್ಸೊ ಆರೋಪದಿಂದ ಅವರನ್ನು ಖುಲಾಸೆಗೊಳಿಸಿದ ಕೇರಳ ಹೈಕೋರ್ಟ್, ಸಮಾಜದಲ್ಲಿ ಯಾವುದೇ ವ್ಯಕ್ತಿಗೆ ತನ್ನ ದೇಹದ ಮೇಲೆ ಸ್ವಾಯತ್ತತೆಯ ಹಕ್ಕಿದೆ ಎಂದು ಹೇಳಿದೆ. ತೀರ್ಪು ನೀಡುವಾಗ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರು, 'ನಗ್ನತೆಯನ್ನು ಅಶ್ಲೀಲತೆ ಅಥವಾ ಅನೈತಿಕತೆ ಎಂದು ವಿಂಗಡಿಸುವುದು ತಪ್ಪು. ನಗ್ನತೆಯನ್ನು ಲೈಂಗಿಕತೆಗೆ ಜೋಡಿಸಬಾರದು. ಮಹಿಳೆಯ ದೇಹದ ಮೇಲ್ಭಾಗ ಮಾತ್ರ ನಗ್ನವಾಗಿರುವುದು ಲೈಂಗಿಕತೆ ಅಲ್ಲ' ಎಂದು ಹೇಳಿದ್ದಾರೆ.

COMMERCIAL BREAK
SCROLL TO CONTINUE READING

ಕೋರ್ಟ್ ಹೇಳಿದ್ದೇನು?
ಫಾತಿಮಾ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್, 33 ವರ್ಷದ ಕಾರ್ಯಕರ್ತೆ ವಿರುದ್ಧದ ಆರೋಪಗಳ ಆಧಾರದ ಮೇಲೆ, ಆಕೆಯ ಮಕ್ಕಳನ್ನು ಯಾವುದೇ ರೀತಿಯ 'ಇಂದ್ರಿಯ ಚಟುವಟಿಕೆ'ಯಲ್ಲಿ ಲೈಂಗಿಕ ತೃಪ್ತಿಗಾಗಿ ಬಳಸಿದ್ದಾಳೆ ಎಂದು  ಯಾರೂ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಆಕೆ ದೇಹವನ್ನು ತನ್ನ ಮಕ್ಕಳು 'ಚಿತ್ರಕಲೆ'ಗಾಗಿ 'ಕ್ಯಾನ್ವಾಸ್' ರೂಪದಲ್ಲಿ ಬಳಸಲು ಅವಕಾಶ ನೀಡಿದ್ದಾಳೆ ಎಂದು ಪೀಠ ಹೇಳಿದೆ. ನ್ಯಾಯಾಲಯವು, “ಮಹಿಳೆಯರು ತಮ್ಮ ದೇಹದ ಬಗ್ಗೆ ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಸಮಾನತೆ ಮತ್ತು ಖಾಸಗಿತನದ ಅವರ ಮೂಲಭೂತ ಹಕ್ಕಿನ ತಿರುಳಾಗಿದೆ. ಇದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ವೈಯಕ್ತಿಕ ಸ್ವಾತಂತ್ರ್ಯದ ಅಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ಫಾತಿಮಾ ಮಂಡಿಸಿದ ವಾದವೇನು?
ಪ್ರಕರಣದಿಂದ ತನ್ನನ್ನು ಖುಲಾಸೆಗೊಳಿಸಬೇಕು ತಾನು ಸಲ್ಲಿಸಿದ್ದ ಅರ್ಜಿಯನ್ನು ಕೆಳ ನ್ಯಾಯಾಲಯ ವಜಾಗೊಳಿಸಿರುವುದನ್ನು ಫಾತಿಮಾ ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟಿಗೆ ಸಲ್ಲಿಸಿದ ಮೇಲ್ಮನವಿಯಲ್ಲಿ, ಫಾತಿಮಾ ಅವರು 'ಬಾಡಿ ಪೇಂಟಿಂಗ್' ಎನ್ನುವುದು ಸಮಾಜದ ದೃಷ್ಟಿಕೋನದ ವಿರುದ್ಧ ರಾಜಕೀಯ ನಡೆ ಎಂದು ವಾದಿಸಿದ್ದಳು, ಮಹಿಳೆಯ ದೇಹದ ಬೆತ್ತಲೆ ಮೇಲ್ಭಾಗವನ್ನು ಲೈಂಗಿಕ ತೃಪ್ತಿ ಅಥವಾ ಲೈಂಗಿಕ ಚಟುವಟಿಕೆಗಳೊಂದಿಗೆ ಜೋಡಿಸಲಾಗುತ್ತದೆ. ಆದರೆ, ಅದೇ  ಪುರುಷರ ವಿಷಯದಲ್ಲಿ ದೇಹದ ಬೆತ್ತಲೆ ಮೇಲ್ಭಾಗವನ್ನು ಆ ರೂಪದಲ್ಲಿ ನೋಡಲಾಗುವುದಿಲ್ಲ' ಎಂದು ವಾದಿಸಿದ್ದಳು. 


ಇದನ್ನೂ ಓದಿ-Manish Sisodia: ಅಬಕಾರಿ ನೀತಿ ಪ್ರಕರಣದಲ್ಲಿ ಮನಿಷ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್


ವಾದ ಒಪ್ಪಿಕೊಂಡ ನ್ಯಾಯಾಲಯ
ಫಾತಿಮಾ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎಡಪ್ಪಗತ್, ಮಕ್ಕಳಿಂದ ದೇಹದ ಮೇಲ್ಭಾಗವನ್ನು ಕಲಾ ಯೋಜನೆಯ ರೂಪದಲ್ಲಿ ನೈಜ ಚಿತ್ರೀಕರಣಕ್ಕಾಗಿ ಬಳಕೆಯಾಗಿದೆ ಹೊರತು ಅದನ್ನು ಯಾವುದೇ ರೀತಿಯ ಲೈಂಗಿಕ ಕ್ರಿಯೆ ಎಂದು ನೋಡಲಾಗುವುದಿಲ್ಲ ಅಥವಾ ಕೆಲಸ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ 'ಅಂತಹ 'ಮುಗ್ಧ ಕಲಾತ್ಮಕ ಅಭಿವ್ಯಕ್ತಿ'ಯನ್ನು ಯಾವುದೇ ರೂಪದಲ್ಲಿ ಲೈಂಗಿಕ ಕ್ರಿಯೆಯೊಂದಿಗೆ ಜೋಡಿಸುವುದು 'ಕ್ರೂರ' ಎಂದು ನ್ಯಾಯಮೂರ್ತಿ ಹೇಳಿದ್ದಾರೆ.


ಇದನ್ನೂ ಓದಿ-Awadesh Rai ಹತ್ಯೆ ಪ್ರಕರಣ, ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ


ಅಶ್ಲೀಲ ಎಂದು ಪ್ರಕರಣ ದಾಖಲಿಸಲಾಗಿದೆ
'ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವೀಡಿಯೊದಲ್ಲಿ ಲೈಂಗಿಕ ತೃಪ್ತಿಯ ಯಾವುದೇ ಸೂಚನೆಗಳಿಲ್ಲ. ಪುರುಷ ಅಥವಾ ಮಹಿಳೆ, ಯಾರೊಬ್ಬರ ದೇಹದ ಬೆತ್ತಲೆ ಮೇಲ್ಭಾಗವನ್ನು ಲೈಂಗಿಕ ತೃಪ್ತಿಯೊಂದಿಗೆ ನೋಡಲಾಗುವುದಿಲ್ಲ.' ವೀಡಿಯೊದಲ್ಲಿ ಫಾತಿಮಾ ತನ್ನ ದೇಹದ ಮೇಲ್ಭಾಗವನ್ನು ನಗ್ನವಾಗಿ ತೋರಿಸಿದ್ದಾಳೆ, ಆದ್ದರಿಂದ ಅದು ಅಶ್ಲೀಲ ಮತ್ತು ಅಸಭ್ಯವಾಗಿದೆ ಎಂದು ಪ್ರಾಸಿಕ್ಯೂಷನ್ ಹೇಳಿಕೊಂಡಿದೆ. ಆದರೆ, ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, 'ನಗ್ನತೆ ಮತ್ತು ಅಶ್ಲೀಲತೆಯು ಯಾವಾಗಲೂ ಸಮಾನಾರ್ಥಕವಲ್ಲ' ಎಂದು ಹೇಳಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.