ತಿರುವನಂತಪುರಂ: ಅಪಘಾತದಲ್ಲಿ ಸಾವನ್ನಪ್ಪಿದ ಕೇರಳ ಪತ್ರಕರ್ತನ ಸಾವಿನ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಆರೋಪಿ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಮಣ್ ಅವರಿಗೆ ಮಂಗಳವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 


COMMERCIAL BREAK
SCROLL TO CONTINUE READING

ಶನಿವಾರ ತಿರುವನಂತಪುರಂನ ಐಎಎಸ್ ಅಧಿಕಾರಿ ಶ್ರೀರಾಮ್ ಅವರಿದ್ದ ಕಾರು ನಿಂತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸಿರಾಜ್ ಪತ್ರಿಕೆಯ ಪತ್ರಕರ್ತಕೆ.ಎಂ.ಬಶೀರ್(35) ಸಾವನ್ನಪ್ಪಿದ್ದರು. ಇವರು ಸಿರಾಜ್ ಪತ್ರಿಕೆಯ ತಿರುವನಂತಪುರ ಬ್ಯೂರೋದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.


ಅಪಘಾತದಲ್ಲಿ ಐಎಎಸ್ ಅಧಿಕಾರಿ ಹಾಗೂ ಸರ್ವೇ ನಿರ್ದೇಶಕ ಶ್ರೀರಾಮ್ ವೆಂಕಟರಮಣ್ ಅವರಿಗೂ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪೋಲೀಸರ ವಿಚಾರಣೆ ಸಂದರ್ಭದಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಶ್ರೀರಾಮ್ ತಮ್ಮ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದುದಾಗಿಯೂ, ಅವರ ಸ್ನೇಹಿತ ಕಾರು ಚಾಲನೆ ಮಾಡುತ್ತಿದ್ದುದಾಗಿಯೂ ತಿಳಿಸಿದ್ದರು.